ಕಾಸರಗೋಡು: ತಾಯಿಯ ಚಿಕಿತ್ಸೆಗೆಂದು ತಿಳಿಸಿ ಯುವತಿಯ ಕೈಯಿಂದ ಪಡೆದ ೨೧ ಲಕ್ಷ ರೂಪಾ ಯಿಗಳನ್ನು ಮರಳಿ ನೀಡಿಲ್ಲವೆಂಬ ಆರೋಪದಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೌತ್ ತೃಕರಿಪುರ ಕುಲೇರಿ ಮಾಡಕಂಡಿ ಹೌಸ್‌ನ ಉಮರುಲ್ ಹುದಾ (39) ನೀಡಿದ ದೂರಿನಂತೆ ಮುಹಮ್ಮದ್ ರಮೀಸ್ ಎಂಬಾತನ ವಿರುದ್ಧ ಚಂ ದೇರ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. 2024 ಸೆಪ್ಟಂಬರ್ ನಿಂದ ೨೦೨೫ ಮೇ ತಿಂಗಳ ವರೆಗಿನ ಕಾಲಾವಧಿಯಲ್ಲಿ ಹಣ ನೀಡಿರು ವುದಾಗಿ ಉಮರುಲ್ ಹುದಾ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೊಹಮ್ಮ ದ್ ರಮೀಸ್‌ನ ತಾಯಿಯ ಚಿಕಿತ್ಸೆ ಗೆಂದು ತಿಳಿಸಿ ಹಣ ಪಡೆದುಕೊಂ ಡಿರುವುದಾಗಿ ದೂರಲಾಗಿದೆ.
