ಬೆಂಗಳೂರು: 1 ಲಕ್ಷ ರೂ. ನೀಡಿದರೆ 10 ಲಕ್ಷ ಲಭಿಸುವುದಾಗಿ ನಂಬಿಸಿ ತಂಡ ಲಕ್ಷಾಂತರ ರೂ. ಅಪಹರಿಸಿದೆ. ವಂಚನೆ ಬಗ್ಗೆ ತಿಳಿದುಕೊಂಡ ಸ್ಥಳೀಯರು ಸನ್ಯಾಸಿ ವೇಷದಲ್ಲಿ ತಲುಪಿದವರನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಪೊಲೀಸರಿಗೆ ಲಕ್ಷಾಂತರ ರೂ.ಗಳ ಖೋಟಾನೋಟುಗಳನ್ನು ನೀಡಿ ತಂಡ ಪರಾರಿಯಾಗಿದೆ. ಬೆಂಗಳೂರು, ಯಾದ್‌ಹಿರ್ ಸುರಪುರದಲ್ಲಿ ಘಟನೆ ನಡೆದಿದೆ. ಸನ್ಯಾಸಿಗಳ ವೇಷದಲ್ಲಿ ತಲುಪಿದ ತಂಡವೊಂದು ವಂಚನೆ ನಡೆಸಿದೆ. 1 ಲಕ್ಷ ರೂ.ವನ್ನು ಇಟ್ಟು ಪ್ರತ್ಯೇಕ ಪೂಜೆ ನಡೆಸಿ ಮಂತ್ರ ಹೇಳಿದರೆ 10 ಲಕ್ಷ ರೂ. ಕೈಗೆ ಸಿಗುವುದಾಗಿ ತಂಡ ಜನರಲ್ಲಿ ವಿಶ್ವಾಸ ಮೂಡಿಸಿತ್ತು. ಆರಂಭದಲ್ಲಿ ತಲುಪಿದವರಿಗೆಲ್ಲಾ ಹಣ ಲಭಿಸಿತ್ತೆನ್ನಲಾಗಿದೆ. ಬಳಿಕ ತಂಡ ವಂಚಿಸಿದೆ. ಹಣ ಇಟ್ಟು ಪೂಜೆ ಮಾಡಿದಾಗ ಲಭಿಸಿದ ಹಣ ಖೋಟಾನೋಟುಗಳಾಗಿತ್ತೆಂದು ಬಳಿಕ ತಿಳಿದು ಬಂತು. ಈ ವಿಷಯ ತಿಳಿಯದೆ ಹಲವಾರು ಮಂದಿ ಹನ ನೀಡಿ ಕೈ ಸುಟ್ಟುಕೊಂಡಿದ್ದಾರೆ. ಯಂತ್ರದ ಸಹಾಯದಿಂದ ಗಾಳಿಯಲ್ಲಿ ನೋಟುಗಳು ಹಾರಿ ಬರುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಂದ ನೋಟುಗಳೆಲ್ಲಾ ಖೋಟಾನೋಟುಗಳಾಗಿತ್ತು. ಈ ವಿಷಯ ತಿಳಿದ ಬಳಿಕ ಸ್ಥಳೀಯರು ತಂಡದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ತಂಡವನ್ನು ಸೆರೆ ಹಿಡಿದಿದ್ದು, ಆದರೆ ಪೊಲೀಸ್ ಠಾಣೆಗೆ ತಲುಪಿದಾಗ ತಂಡವು ಪೊಲೀಸರಿಗೆ ಲಕ್ಷಾಂತರ ರೂ. ಖೋಟಾನೋಟು ನೀಡಿ ಅಲ್ಲಿಂದ ಪರಾರಿಯಾಗಿರುವುದಾಗಿ ಹಣ ಕಳೆದುಕೊಂಡವರು ಆರೋಪಿಸಿದ್ದಾರೆ







