ಮಹಿಳೆಯರಿಗೆ ಉಚಿತ ಪ್ರಯಾಣ ಕೆಎಸ್‌ಆರ್‌ಟಿಸಿ ಆರ್ಡಿನರಿ ಬಸ್‌ಗಳಲ್ಲಿ  ಮಾತ್ರ

ತಿರುವನಂತಪುರ:  ಯುಡಿಎಫ್ ಸರಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳಲ್ಲೊಂದಾದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯವನ್ನು ಕೆಎಸ್‌ಆರ್‌ಟಿಸಿಯ ಆರ್ಡಿನರಿ ಬಸ್‌ಗಳಲ್ಲಿ ಮಾತ್ರವಾಗಿ ಸೀಮಿತಗೊಳಿಸಲು ಸರಕಾರ ಮುಂದಾ ಗಿದೆ.  ರಾಜ್ಯ ಸಚಿವ ಸಂಪುಟದ ಮುಂದಿನ ಸಭೆಯಲ್ಲಿ  ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

ಫಾಸ್ಟ್ ಪ್ಯಾಸೆಂಜರ್ ಮತ್ತು ಅದಕ್ಕಿಂತ ಮೇಲ್ಪಟ್ಟ ಶ್ರೇಣಿಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಪ್ರಾಯೋಗಿಕವಲ್ಲವೆಂದು ಈ ಬಗ್ಗೆ  ಅಧ್ಯಯನ ನಡೆಸಿದ ಕೆಎಸ್‌ಆರ್‌ಟಿಸಿ ತಜ್ಞರ ಸಮಿತಿ ಸರಕಾರಕ್ಕೆ ತಿಳಿಸಿದೆ. ರಾಜ್ಯದ ಹೆಚ್ಚಿನ ಆರ್ಡಿನರಿ ಬಸ್‌ಗಳು ಈಗ ನಷ್ಟದಲ್ಲಿಸಂಚರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯ ಎಲ್ಲಾ ಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸುವುದು ಕೆಎಸ್‌ಆರ್‌ಟಿಸಿ ಯನ್ನು ತೀವ್ರ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಲಿದೆ. ಇದಕ್ಕಾಗಿ  ಪ್ರತೀ ತಿಂಗಳು ೯೦ ಕೋಟಿ ರೂ.ನಿಂದ 100 ಕೋಟಿ ರೂ.ಗಳನ್ನು ಸರಕಾರ ನೀಡಬೇಕಾಗಿ ಬರಲಿದೆ. ಇದರ ಹೊರತಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳವೇತನ ಮತ್ತು ಪಿಂಚಣಿಯನ್ನು ನೀಡಲು ಸರಕಾರ ತಿಂಗಳಿಗೆ  ೮೦ ತೋಟಿ ರೂ.ನೀಡುತ್ತಿದೆ. ಇದನ್ನೆಲ್ಲಾ ಪರಿಶೀಲಿಸಿ ಉಚಿತ ಪ್ರಯಾಣ ವಿಷಯದಲ್ಲಿ ಮುಂದಿನ ರಾಜ್ಯ ಸಚಿವ ಸಂಪುಟದಲ್ಲಿ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಜೂನ್ ೧೫ರಿಂದ ಉಚಿತ ಪ್ರಯಾಣ ಸೌಕರ್ಯ ಜ್ಯಾರಿಗೊಳ್ಳಲಿದೆ.

You cannot copy contents of this page