ಮದ್ಯಪಾನದ ಬಳಿಕ ವಾಗ್ವಾದ ಗೆಳೆಯನನ್ನು ಇರಿದು ಕೊಲೆ

ತಿರುವನಂತಪುರ: ನೆಯ್ಯಾಟಿಂಗ ರದಲ್ಲಿ ಗೆಳೆಯನನ್ನು ಯುವಕ ಮನೆಗೆ ಅತಿಕ್ರಮಿಸಿ ನುಗ್ಗಿ ಕಡಿದು ಕೊಲೆಗೈದಿದ್ದಾನೆ. ಪುಳಿಕುನ್ನ್ ನಿವಾಸಿ ರಾಜನ್ (45) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಆರೋಪಿ ವೆಂಗಾನೂರ್ ನಿವಾಸಿ ಅನೂಪ್ ಕೃಷ್ಣನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಒಂಟಿಯಾಗಿ ವಾಸಮಾಡುತ್ತಿದ್ದ ರಾಜನ್‌ರ ಮೃತದೇಹ ನಿನ್ನೆ ರಾತ್ರಿ ಎಂಟು ಗಂಟೆಗೆ ನೆರೆಮನೆ ನಿವಾಸಿಗಳು ಪತ್ತೆಹಚ್ಚಿದ್ದಾರೆ. ದೇಹದಲ್ಲಿ ೩೫ರಷ್ಟು ಕಡಿದ ಗಾಯಗಳಿವೆ. ಕುತ್ತಿಗೆಯಲ್ಲಿ ಆಳವಾದ ಗಾಯ ಕಂಡುಬರುತ್ತಿದೆ. ಪತ್ನಿಯೊಂದಿಗೆ ವಿರಸಗೊಂಡು ಏಕಾಂಗಿಯಾಗಿ ರಾಜನ್ ವಾಸಿಸುತ್ತಿದ್ದರು. ಇಲ್ಲಿಗೆ ಪ್ರತಿದಿನ ಮದ್ಯಪಾನಕ್ಕಾಗಿ ತಲುಪುವ ಗೆಳೆಯ ಅನೂಪ್‌ಕೃಷ್ಣ ನಿನ್ನೆಯೂ ತಲುಪಿದ್ದನು. ಮದ್ಯಪಾನದ ಮಧ್ಯೆಉಂಟಾದ ವಾಗ್ವಾದ ಕೊಲೆಗೆ ಕಾರಣವೆನ್ನಲಾಗಿದೆ. ಕೊಲೆ ನಡೆಸಿದ ಬಳಿಕ ರಾಜನ್ ಬೈಕ್ ಸಹಿತ ಅನೂಪ್ ಪರಾರಿಯಾಗಿದ್ದಾನೆ. ದಾರಿ ಮಧ್ಯೆ ಪೊಲೀಸರು ತಡೆದು ನಿಲ್ಲಿಸಿದಾಗ  ಬಟ್ಟೆ ಬರೆಯಲ್ಲಿ ರಕ್ತದ ಕಲೆ ಕಂಡುಬಂದಿದ್ದು, ವಿಚಾರಿಸಿದಾಗ ಕೊಲೆ ಬಗ್ಗೆ ತಿಳಿದುಬಂದಿದೆ.

ವಾಹನದಿಂದ ಕೊಲೆಗೆ  ಉಪಯೋಗಿಸಿದ ಕತ್ತಿಯನ್ನು ವಶಪಡಿಸಲಾಗಿದೆ. ಮದ್ಯಪಾನಗೈದು  ಪ್ರತಿದಿನವೂ  ರಾಜನ್ ಅನೂಪ್‌ಗೆ ಹಲ್ಲೆ ನಡೆಸುತ್ತಿದ್ದನು.  ಈ ದ್ವೇಷವೇ ಕೊಲೆಗೆ ಕಾರಣವೆನ್ನಲಾಗಿದೆ.

RELATED NEWS

You cannot copy contents of this page