ಧನಸಹಾಯ ವಿತರಣೆ ಆನ್ಲೈನ್ ಮೂಲಕ ಶೀಘ್ರ ಜ್ಯಾರಿ- ಸಹಕಾರಿ ಸಚಿವ ವಿ.ಎನ್. ವಾಸವನ್


ಕಾಸರಗೋಡು: ಧನಸಹಾಯ ವಿತರಣೆ ಚಟುವಟಿಕೆಗಳನ್ನು ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆಯ ಮೂಲಕ ಜ್ಯಾರಿಗೊಳಿಸಲಾಗುವುದೆಂದು ಅದರಿಂದಾಗಿ ದೂರು ಕಡಿಮೆ ಮಾಡಲು, ಶೀಘ್ರದಲ್ಲೇ ಧನ ಸಹಾಯವ ವಿತರಿಸಲು ಸಾಧ್ಯವಾಗಲಿದೆ ಎಂದು ಸಹಕಾರಿ ಬಂದರು, ದೇವಸ್ವಂ ಇಲಾಖೆ ಸಚಿವ ವಿ.ಎನ್. ವಾಸವನ್ ನುಡಿದರು. ಕಾಞಂಗಾಡ್ ವ್ಯಾಪಾರ ಭವನದಲ್ಲಿ ಕೇರಳ ಸಹಕಾರಿ ಅಭಿವೃದ್ಧಿ ಕ್ಷೇಮನಿಧಿ ಬೋರ್ಡ್ ಕಡತ ತೀರ್ಪು ಅದಾಲತ್ ಕಾರ್ಯಕ್ರಮದಲ್ಲಿ ಧನ ಸಹಾಯ ವಿತರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಅಧ್ಯ ಯನಕ್ಕಾಗಿ ಮೊಬೈಲ್ ಫೋನ್ಗಳನ್ನು ಖರೀದಿಸಲು ಸಹಾಯ ನೀಡಿದ ಬ್ಯಾಂಕ್ಗಳಾಗಿವೆ ರಾಜ್ಯದ ಸಹಕಾರಿ ಬ್ಯಾಂಕ್ಗಳು. ವಯನಾಡ್ ಜಿಲ್ಲೆಯಲ್ಲಿ ಅತ್ಯಪೂರ್ವ ದುರಂತ ಸಂಭವಿಸಿದಾಗ ಅಲ್ಲಿ ಸರ್ವವೂ ನಷ್ಟಗೊಂಡ ಮನುಷ್ಯರ ಜೊತೆ ನಿಂತು ಅವರ ಸಾಲವನ್ನು ಮನ್ನಾ ಮಾಡಿದ ಬ್ಯಾಂಕ್ಗಳಾಗಿವೆ ಕೇರಳದ ಸಹಕಾರಿ ಸಂಘಗಳೆAದು ಸಚಿವರು ನುಡಿದರು.
2008ರಲ್ಲಿ ರಿಸ್ಕ್ ಫಂಟ್ ಆರಂಭಿಸಿದ ಅಂದಿನಿAದ ಇದುವರೆಗೆ 1,24,365 ಸಾಲಗಳಲ್ಲಾಗಿ 991.29 ಕೋಟಿ ರೂ. ರಿಸ್ಕ್ ಫಂಡ್ ಮರಣಾ ನಂತರ, ಚಿಕಿತ್ಸಾ ಧನಸಹಾಯವಾಗಿ ಬೋರ್ಡ್ನಿಂದ ಮಂಜೂರು ಮಾಡಲಾಗಿದೆ ಎಂದು ಅವರು ನುಡಿ ದರು. ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದರು. ಶಾಸಕ ಸಿ.ಎಚ್. ಕುಂಞAಬು, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡ್ ನಗರಸಭಾಧ್ಯಕ್ಷೆ ಕೆ.ವಿ. ಸುಜಾತ, ಬೋರ್ಡ್ ಸದಸ್ಯ ಸಾಬು ಅಬ್ರಹಾಂ, ಪಿ. ಮಣಿಮೋಹನನ್, ವಿ. ಚಂದ್ರನ್, ಟಿ.ಎಂ. ಮ್ಯಾಥ್ಯು, ಕೆ.ವಿ. ವಿಶ್ವನ್, ಸಿ.ಇ. ಜಯನ್, ಬಿ. ಸುಕುಮಾರನ್ ಮಾತನಾಡಿದರು. ಜೋಯಿಂಟ್ ರಿಜಿಸ್ಟ್ರಾರ್ ಜಯಕುಮಾರ್ ವರದಿ ಮಂಡಿಸಿದರು. ಸಿ.ಕೆ. ಶ್ರೀಧರನ್ ಸ್ವಾಗತಿಸಿ, ಎಂ. ಮೋಹನನ್ ವಂದಿಸಿದರು.

You cannot copy contents of this page