ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್ ಮಾರ್ಪನಡ್ಕ ಶಾಖೆಯ ನೌಕರ, ಕುಂಟಿಕಾನ ಶ್ರೀ ಭಾರತಾಂಬ ಸೇವಾ ಟ್ರಸ್ಟ್‌ನ ಸದಸ್ಯ, ಸಾಮಾಜಿಕ ಕಾರ್ಯಕರ್ತ ನೀರ್ಚಾಲು ದೇವರಮೆಟ್ಟು ನಿವಾಸಿ ನಳಿನಾಕ್ಷನ್‌ರ ಚಿಕಿತ್ಸಾ ಸಹಾಯಕ್ಕಾಗಿ ಮೊತ್ತ ಹಸ್ತಾಂತರಿಸಲಾಯಿತು. ಅಪಘಾತದಲ್ಲಿ ಗಾಯಗೊಂಡ ನಳಿನಾಕ್ಷನ್ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ದೊಡ್ಡ ಮೊತ್ತ ವೆಚ್ಚವಾಗಲಿದ್ದು ಈ ಹಿನ್ನೆಲೆಯಲ್ಲಿ ಸಹಾಯ ನೀಡಲಾಗಿದೆ.
ದುರ್ಗಾ ಫ್ರೆಂಡ್ಸ್ ಕ್ಲಬ್ ಅಗಲ್ಪಾಡಿ ಸಂಗ್ರಹಿಸಿದ ಮೊತ್ತವನ್ನು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ, ವಾರ್ಡ್ ಪ್ರತಿನಿಧಿ ಶ್ಯಾಮ್‌ಪ್ರಸಾದ್ ಸರಳಿ ಇವರ ಉಪಸ್ಥಿತಿಯಲ್ಲಿ ಶ್ರೀಭಾರತಾಂಬ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಈಶ್ವರಚಂದ್ರ ಪ್ರಸಾದ ಕುಳಮರ್ವ ಹಸ್ತಾಂತರಿಸಿದರು. ಪದಾಧಿಕಾರಿಗಳಾದ ರಾಜೇಶ್ ಮಾಸ್ತರ್ ಅಗಲ್ಪಾಡಿ, ಪ್ರಶಾಂತ್ ಪ್ರಯಾರಾಗ್, ದೀಕ್ಷಿತ್ ಅಗಲ್ಪಾಡಿ, ಸೂರ್ಯ ಕಜೆಮಲೆ, ಚಂದ್ರ ಪದ್ಮಾರು, ಕರುಣಾಕರ ಚೂರಿಕ್ಕೋಡು, ಉದಯ ಶಿವರಾಮ, ಮನೀಶ್‌ರಾಜ್, ಗಿರೀಶ್ ಅಗಲ್ಪಾಡಿ, ಜಯಪ್ರಕಾಶ್, ಗಂಗಾಧರ ಮಣಿಯಾಣಿ ಉಪಸ್ಥಿತರಿದ್ದರು. ಶ್ರೀ ಭಾರತಾಂಬ ಸೇವಾ ಟ್ರಸ್ಟ್ ವತಿಯಿಂದ ಚಿಕಿತ್ಸಾ ಸಹಾಯಕ್ಕಾಗಿ ವಿನಂತಿಸಲಾಗಿದ್ದು ದಾನಿಗಳು ಸಹಕರಿಸಿದರು.







