ಸೀತಾಂಗೋಳಿ: ಸೀತಾಂ ಗೋಳಿಯಲ್ಲಿ ಜೂಜಾಟ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಸ್ಥಳದಿಂದ 30,260 ರೂಪಾಯಿ ಗಳನ್ನು ವಶಪಡಿಸಲಾಗಿದೆ. ಪೊಲೀಸರನ್ನು ಕಂಡು ಇಬ್ಬರು ಓಡಿ ಪರಾರಿಯಾಗಿದ್ದಾರೆ. ಮುಗು ರೋಡ್‌ನ ಅಬ್ದುಲ್ ಅಸೀಸ್ (45), ಉಪ್ಪಳದ ಮುಹಮ್ಮದ್ ಎಂಬಿವರು ಜೂಜಾಟ ವೇಳೆ ಸೆರೆಗೀಡಾದ ವ್ಯಕ್ತಿಗಳಾಗಿದ್ದಾರೆ. ಮೊನ್ನೆ ರಾತ್ರಿ 1 ಗಂಟೆ ವೇಳೆ ಸೀತಾಂಗೋಳಿ -ಕುಂಬಳೆ ರಸ್ತೆಯ ಬಸ್ ವೈಟಿಂಗ್ ಶೆಡ್‌ನ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ತಂಡ ಜೂಜಾಟ ನಿರತವಾಗಿತ್ತು. ಈ ಬಗ್ಗೆ ಲಭಿಸಿದ ಮಾಹಿತಿ ಪ್ರಕಾರ ಸಬ್ ಇನ್ಸ್ ಪೆಕ್ಟರ್ ಸಿ. ಪ್ರದೀಪ್ ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ತಲುಪಿತ್ತು. ನಾಲ್ಕು ಮಂದಿ ಜೂಜಾಟದಲ್ಲಿ ತೊಡಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.






