ಜುಗಾರಿ ದಂಧೆ : 6 ಮಂದಿ ಸೆರೆ

ಬದಿಯಡ್ಕ: ಹಣವಿರಿಸಿ ಕುಟುಕುಟು ಜುಗಾರಿದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಬದಿಯಡ್ಕ ಎಸ್‌ಐ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪೆರ್ಲ ಬಡಾಜೆಯ ದಿನೇಶ್ (40), ಕುಂಬ್ಡಾಜೆ ಬಳ್ಳಪದವಿನ ನವೀನ್ ಪ್ರಕಾಶ್ (50), ಜಯೇಶ್ (36) ನಾರಂಪಾಡಿ ನೆಲ್ಯಡ್ಕದ ಸತೀಶ್ (31), ಉವೈಸ್ (21), ಬೆಳ್ಳೂರಿನ ಕೃಷ್ಣ (25) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ 2290 ರೂ. ವಶಪಡಿಸಲಾಗಿದೆ. ನಿನ್ನೆ ಸಂಜೆ ನಾರಂಪಾಡಿ   ನೆಲ್ಯಡ್ಕದ ಬಸ್ ವೈಟಿಂಗ್ ಶೆಡ್ ಸಮೀಪದ ಹಿತ್ತಿಲಲ್ಲಿ ಜುಗಾರಿ ದಂಧೆ ನಡೆಯುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page