ಪೈವಳಿಕೆ: ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಜಯಂತಿಯ ಅಂಗವಾಗಿ ಜರಗಿದ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಂ ಭಟ್ ಉದ್ಘಾಟಿಸಿದರು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಿಕ್ಷಕ ರವಿಕುಮಾರ್ ವಂದಿಸಿದರು. ತದನಂತರ ಪರಿಸರ ಶುಚೀಕರಣಕ್ಕೆ ಚಾಲನೆ ನೀಡಲಾಯಿತು. ರಾಜೇಶ್ವರಿ.ಬಿ, ಪ್ರಮೀಳಾ.ಡಿ.ಎನ್, ಗೋಪಾಲ ಕೃಷ್ಣ ಭಟ್ ಶುಭ ಹಾರೈಸಿದರು.
