ಸ್ಪಂದನ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕ ಗಣೇಶೋತ್ಸವ

ಮೀಂಜ :ಸ್ಪಂದನ ಆರ್ಟ್ಸ್ ಆಂಡ್ ಸ್ಪೋರ್ಟ್ ಕ್ಲಬ್ ತಿಲಕ್ ನಗರ ಎಲಿಯಾಣ ಇದರ ವತಿಯಿಂದ 4ನೇ ವರ್ಷದ ಶ್ರೀ ಗಣೇಶೋತ್ಸವ ಜರಗಿತು. ಬೆಳಗ್ಗೆ ಗಣಪತಿ ಪ್ರತಿಷ್ಠೆ ಗಣಪತಿ ಹವನ ಶ್ರೀ ಶಾಸ್ತ ಭಜನಾ ಮಂದಿರ ಚಿನಾಲದ ವತಿಯಿಂದ ಭಜನಾ ಸೇವೆ ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉತ್ತಮ ಕೃಷಿ ಕಾರ್ಮಿಕರಿಗೆ ನೀಡುವ ಈ ವರ್ಷದ ‘ ಸ್ಪಂದನ ಗ್ರಾಮೀಣ ಪ್ರಶಸ್ತಿ’ಯನ್ನು ಕುಂಞÂ ಪೂಜಾರಿ ಹಾಗೂ ಭಾಗಿ ದಂಪತಿಗೆ ನೀಡಲಾಯಿತು.
ನಂತರ ಗ್ರಾಮದ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿದ ವÀರನ್ನು ಸನ್ಮಾನಿಸಲಾಯಿತು. ನಿವೃತ, ಮುಖ್ಯೋಪಾಧ್ಯಾಯ ಬಾಲಕೃಷ್ಣ ಭಟ್, ಹಿರಿಯ ಕೃಷಿಕರಾದ ಮಮುಂಜಿ ಹಾಜಿ ಚಿನಾಲ, ಅಣ್ಣು ಮೂಲ್ಯ, ಪಂಚಾಯತು ಸದಸ್ಯೆ ಸರಸ್ವತಿ, ಕಣ್ಣೂರು ವಿಶ್ವವಿದ್ಯಾನಿಲಯ ಬಿ.ಎ ಕನ್ನಡ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ದೀಕ್ಷಿತ, ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ ಬಸವರಾಜ್ ಇವರನ್ನು ಸನ್ಮಾನಿಸಲಾಯಿತು. ಗರಿಷ್ಠ -ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಗಣಪತಿಯ ವಿಸರ್ಜನೆಯ ಶೋಭಾಯಾತ್ರೆ ಚಿನಾಲ ಶ್ರೀ ಶಾಸ್ತ ಅಯ್ಯಪ್ಪ ಭಜನಾ ಮಂದಿರ,  ಕುಳೂರು ದಾರಿಯಾಗಿ ಸಾಗಿ ಪೊಯ್ಯೆಲು ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು.

You cannot copy contents of this page