ಹವ್ಯಕ ವಲಯದಿಂದ ಮಧೂರು ಕ್ಷೇತ್ರಕ್ಕೆ ಕಸದ ಬುಟ್ಟಿ ಕೊಡುಗೆ

ಕಾಸರಗೋಡು: ಮುಳ್ಳೇರಿಯ ಹವ್ಯಕ ಮಂಡಲಾಂತರ್ಗತ ಹವ್ಯಕ ವಲಯ, ಕಾಸರಗೋಡು, ನೇತೃತ್ವದಲ್ಲಿ ಮನ್ನಿಪ್ಪಾಡಿ ಘಟಕದ ಗುರಿಕ್ಕಾರ ಮಹಾಲಿಂಗೇಶ್ವರ ಭಟ್‌ರ ಪ್ರಾಯೋಜಕತ್ವದಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ 27 ಕಸ ಹಾಕುವ ಬುಟ್ಟಿಗಳನ್ನು ಕೊಡುಗೆಯಾಗಿ ಸಮರ್ಪಣೆ ಮಾಡಲಾಯಿತು.
ಕ್ಷೇತ್ರದ ಅರ್ಚಕ ಕೃಷ್ಣಮೂರ್ತಿ ಕಲ್ಲೂರಾಯ ಪ್ರಾರ್ಥನೆ ನಡೆಸಿದರು. ಕಾಸರಗೋಡು ಹವ್ಯಕ ವಲಯದ ಅಧ್ಯಕ್ಷ ಗೋವಿಂದ ಭಟ್ ವೈ ಕೆ, ಕಾರ್ಯದರ್ಶಿ ಡಿ.ಎನ್ ಮಹೇಶ ಮನ್ನಿಪ್ಪಾಡಿ, ಪ್ರಾಯೋಜಕ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ, ಪ್ರೇಮ್ ಪ್ರಕಾಶ್ ಮನ್ನಿಪ್ಪಾಡಿ , ಬಿ. ಮಹಾಬಲ ಭಟ್, ಉಳುವಾನ ಈಶ್ವರ ಭಟ್, ಡಿ ಜಯನಾರಾಯಣ ತಾಯನ್ನೂರು, ಈಶ್ವರ ಭಟ್ ಕಿಳಿಂಗಾರು, ಶಂಕರನಾರಾಯಣ ಭಟ್ ಅಳಕ್ಕೆ, ಶಾಮ ಮಧ್ಯಸ್ಥ ಮಧೂರು, ಮುರಳಿ ಮೊಗ್ರಾಲ್, ಸುಬ್ರಹ್ಮಣ್ಯ ಶರ್ಮ ಅಳಕ್ಕೆ, ಕೆ.ಕೃಷ್ಣ ಭಟ್, ಶಿವಶಂಕರ ಭಟ್ ಬಿ. ಎನ್, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

You cannot copy contents of this page