ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯನ್ನು ನಗರಸಭೆ ಅವಗಣಿಸುತ್ತಿದೆ ಎಂದು ಆರೋಪಿಸಿ, ಜನರಲ್ ಆಸ್ಪತ್ರೆಯ ರೋಗಿಗಳಿಗೆ ನೀಡುತ್ತಿದ್ದ ಹಾಲು ವಿತರಣೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಕಾಸರಗೋಡು ಬ್ಲೋಕ್ ಸಮಿತಿ ನೇತೃತ್ವದಲ್ಲಿ ನಗರಸಭೆಗೆ ಮಾರ್ಚ್ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಡ್ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ವಿ. ಮಿಥುನ್‌ರಾಜ್ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ಪ್ರವೀಣ್ ಪಾಡಿ, ಅಜಿತ್ ಪಾರೆಕಟ್ಟೆ, ವಿನಯನ್ ಚಾತಪ್ಪಾಡಿ, ಸಬೀನ್ ಬಟ್ಟಂಪಾರೆ, ಮಾರ್ಟಿನ್ ಇ., ಅಶ್ವತಿ ಮಾತನಾಡಿ ದರು. ಬ್ಲೋಕ್ ಕಾರ್ಯದರ್ಶಿ ಸುಭಾಶ್ ಪಾಡಿ ಸ್ವಾಗತಿಸಿದರು.
