ಕಾಸರಗೋಡು: ಮನೆಯೊಳಗೆ ನಿದ್ರಿಸುತ್ತಿದ್ದ ಯುವತಿ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಚೀಮೇನಿ ಪೋತಕಂಡಂ ನಂಙಾರತ್ ಹೌಸ್ ನಿವಾಸಿ ಕರೀಂರ ಪುತ್ರಿ ಶರಫು ನಾಜಿಯ (19) ನಾಪತ್ತೆಯಾದ ಬಗ್ಗೆ ದೂರ ಲಾಗಿದೆ. ನಿನ್ನೆ ರಾತ್ರಿ 12 ಗಂಟೆಯ ಬಳಿಕ ಯುವತಿ ನಾಪತ್ತೆಯಾಗಿ ರಬೇಕೆಂದು ಶಂಕಿಸಲಾಗಿದೆ. ಚೀಮೇನಿ ಪೊಲೀಸರು ಕೇಸು ನೋಂದಾಯಿಸಿ ದ್ದಾರೆ. ಯುವತಿಯ ಪತ್ತೆಗೆ ಯತ್ನ ನಡೆಸಲಾಗುತ್ತಿದೆ. ಇದೇ ವೇಳೆ ಈಕೆ ಯುವಕನೊಂದಿಗೆ ಪತ್ತೆಹಚ್ಚಿರುವುದಾಗಿ ಪೊಲೀಸರು ಮಾಹಿತಿ ನೀಡುತ್ತಿದ್ದು, ಇವರಿಬ್ಬರನ್ನು ಠಾಣೆಗೆ ಹಾಜರಾಗಲು ನಿರ್ದೇಶಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
