ಕಾಸರಗೋಡು: ಇನ್‌ಸ್ಟಾ ಗ್ರಾಂನಲ್ಲಿ ಪರಿಚಯಗೊಂಡ ೧೫ರ ಹರೆಯದ ಬಾಲಕಿಯನ್ನು ಎರ್ನಾಕುಳಂಗೆ ಕರೆದೊಯ್ದು ಕಿರುಕುಳ ನೀಡಿದ ಆರೋಪದಂತೆ ಯುವತಿ ಸಹಿತ ಮೂವರ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಶೇಣಿ ನಿವಾಸಿಗಳಾದ ಜಾಸಿರ್, ಸಕೀರ್ ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಯುವತಿಯ ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ಯನ್ನು ಪುಸಲಾಯಿಸಿದ ಆರೋಪಿ ಗಳು ಆಕೆಯ ನಗ್ನ ಚಿತ್ರಗಳನ್ನು ಪಡೆದು ಕೊಂಡಿದ್ದರೆನ್ನಲಾಗಿದೆ. ಬಳಿಕ ಬಾಲಕಿಗೆ ಬೆದರಿಕೆಯೊಡ್ಡಿ ಹಣ ಲಪಟಾಯಿಸಿರುವುದಾಗಿ ದೂರ ಲಾಗಿದೆ. ಅಲ್ಲದೆ ಬಾಲಕಿಯನ್ನು ಆರೋಪಿಗಳು ಎರ್ನಾಕುಳಂಗೆ ಕರೆದೊಯ್ದು ಕಿರುಕುಳ ನೀಡಿ ದ್ದಾರೆನ್ನಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಮೇಲ್ಪ ರಂಬ ಪೊಲೀಸರು ಕೇಸು ದಾಖ ಲಿಸಿ ತನಿಖೆ ನಡೆಸುತ್ತಿದ್ದಾರೆ.