ಸೇವಾ ಮನೋಭಾವದಿಂದ ಸಮಾಜಕ್ಕೆ ಕೊಟ್ಟರೆ ಪುಣ್ಯಪ್ರಾಪ್ತಿ- ಒಡಿಯೂರು ಶ್ರೀ

ಮಂಜೇಶ್ವರ: ಗಳಿಸಿದ ಸಂಪತ್ತನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜಕ್ಕೆ ಕೊಡುವ ಸೇವಾ ಮನೋಭಾವದಿಂದ ಪುಣ್ಯಪ್ರಾಪ್ತಿಯಾ ಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿ ದರು. ಕೊಣಿಬೈಲು ಉಳಿಪಾಡಿ ಗುತ್ತು ಮಲ್ಲಿಕಾ ಆರ್. ಚೌಟ ನಿರ್ಮಿಸಿಕೊಟ್ಟ ವೆಂಕಟೇಶ ವೈಭವ ಹಾಗೂ ಆಸ್ಟ್ರೇಲಿಯಾದ ನ್ಯೂಜರ್ಸಿಯ ಡಾ. ಬೆಳ್ಳೆ ದಿನಕರ ರೈ, ಶಕೀಲಾ ಡಿ. ರೈ ಉಳಿಪಾಡಿಗುತ್ತು ದಂಪತಿ ನಿರ್ಮಿಸಿಕೊಟ್ಟ ಶ್ರೀ ವೈಷ್ಣವಿ ಸದನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಸ್ವಾಮೀಜಿ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ ಬದಿಯಡ್ಕ ಉದ್ಯಮಿ ವಸಂತ ಪೈ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿ ವರ್ಕಾಡಿ, ಕುಶಲಕುಮಾರ, ಮಹಲಿಂಗೇಶ್ವರ ಭಟï, ಬಾರೇ ಸಿಂಧರ್ಗ ವಿಷ್ಣು ಪ್ರಸಾದ್ ಭಟ್, ಪ್ರಧಾನ ಅರ್ಚಕ ಪದ್ಮ, ಕೋಣಿಬೈಲು ಮಲ್ಲಿಕಾ ಆರ್ ಚೌಟ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ತಿನ ಮೀರಾ ಆಳ್ವ ಧಾರ್ಮಿಕ ಭಾಷಣ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಉಮಾಶಂಕರ್ ಶೇನವ ಉಳಿಪಾಡಿ ಗುತ್ತು. ಡಾ. ಮದನ್ ಮೋಹನ್ ನಾಯಕ್ ಅಡೇಕಳ, ಅನಿಲ್ ಕುಮಾರ್ ಹೆಗ್ಡೆ ನ್ಯೂಜರ್ಸಿ ಅಮೇರಿಕಾ, ಪ್ರಭಾಕರ್ ಶೆಟ್ಟಿ ಅಳಕೆ ಮಂಗಳೂರು, ರಾಜೇಂದ್ರ ಶೆಟ್ಟಿ ಕೋಣಿಬೈಲು,  ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ, ಬ್ಲಾಕ್ ಪಂ. ಸದಸ್ಯೆ ಅಶ್ವಿನಿ ಎಂ.ಎಲ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ರೇಣುಕಾ ವಿ, ಕೃಷ್ಣ ನಾಯಕ್ ಸೊಡಂಕೂರು,  ಅಭಿಷೇಕ್ ಶೆಟ್ಟಿ ಕೋಣಿಬೈಲು, ಉಪಸ್ಥಿತರಿದ್ದರು. ಶಿವಪ್ರಸಾದ್ ಶೆಟ್ಟಿ ಅನೆಯಾಲ ಗುತ್ತು ಸ್ವಾಗತಿಸಿ, ಎನ್.ಟಿ. ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಕೇಶ್ ರೈ ಕರ್ಪಿಕಾರ್, ರೇಣುಕಾ ನಿರೂಪಿಸಿದರು. ವೆಂಕಟ್ ರಾಜ ರೈ ನಾಣಿಲ್ತಡಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನೇಶ್ ಕೋಡಪದವು ಬಳಗದಿಂದ ಚಂದ್ರಾವಳಿ ವಿಳಾಸ ಎಂಬ ಯಕ್ಷಗಾನ ಬಯಲಾಟ ನಡೆಯಿತು.

RELATED NEWS

You cannot copy contents of this page