ಕೊಚ್ಚಿ: ರಾಜ್ಯದಲ್ಲಿ ದಾಖಲೆಗಳನ್ನು ಬೇಧಿಸಿ ಚಿನ್ನದ ಬೆಲೆಯ ನೆಗೆತ ಮುಂದುವರಿಯುತ್ತಿದೆ. ಪವನ್ಗೆ ಇದೇ ಮೊದಲಾಗಿ 80,000 ದಾಟಿ 80880 ರೂ.ಗೆ ತಲುಪಿದೆ. ದಿನವೊಂದರಲ್ಲಿ 1000 ರೂ. ಹೆಚ್ಚಾಗಿದೆ. ಇದೇ ವೇಳೆ ಗ್ರಾಂಗೆ 10,110 ರೂ. ಆಗಿದೆ. ನಿನ್ನೆ 9985 ರೂ. ಆಗಿತ್ತು ಗ್ರಾಂನ ಬೆಲೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಸಾರ್ವಕಾಲಿಕ ದಾಖಲೆ ಆಗಿದೆ. 10 ಗ್ರಾಂಗೆ 1ಲಕ್ಷದ 9000 ರೂ. ಆಗಿ ಮಾರಾಟವಾಗುತ್ತಿದೆ. ಕಳೆದ ತಿಂಗಳ 8ರಂದು 75,760 ರೂ. ಆಗಿದ್ದ ಚಿನ್ನದ ಬೆಲೆ ಬಳಿಕದ 20ನೇ ದಿನಾಂಕದವರೆಗಿನ ಕಾಲಾವಧಿಯಲ್ಲಿ 2300 ರೂ. ಕುಸಿದು ಆ ಬಳಿಕ ಮತ್ತೆ ಏರಿಕೆ ಕಂಡು ಬಂದಿದೆ. ಈ ತಿಂಗಳ ಪ್ರಥಮ ದಿನಗಳಲ್ಲಿ 77,640 ರೂ. ಆಗಿತ್ತು ಪವನ್ ಬೆಲೆ. ಈಗ ಅದು 80 ಸಾವಿರವನ್ನೂ ದಾಟಿದೆ.
