ಉಪ್ಪಳ: ಕುಂಬಳೆಯಲ್ಲಿ ಮನೆ ಯಿಂದ ನಗ-ನಗದು ಕಳವಿಗೀಡಾದ ಪ್ರಕರಣದಲ್ಲಿ ತನಿಖೆ ಮುಂದು ವರಿಯುತ್ತಿರುವಂತೆಯೇ ಉಪ್ಪಳ ಹಾಗೂ ಬದಿಯಡ್ಕದಲ್ಲಿ ಮನೆಗಳಿಂದ ಕಳವು ನಡೆದಿದೆ. ಉಪ್ಪಳ ಬಪ್ಪಾಯಿತೊಟ್ಟಿಯ ಅಹಮ್ಮದ್ ಮಂಜಿಲ್‌ನ ರುಕ್ಸಾನ ಎಂಬವರ ಮನೆಯಿಂದ 23.5 ಪವನ್ ಚಿನ್ನಾಭರಣಗಳು ಕಳವಿಗೀಡಾಗಿದೆ. ಈ ಬಗ್ಗೆ ರುಕ್ಸಾನ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಮನೆಯ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣಗಳು ಕಳವಿಗೀಡಾಗಿದೆ. ದೂರುದಾತೆಯ ಮಗಳ ಮದುವೆ ಜನವರಿ 23ರಂದು ನಡೆದಿತ್ತು. ಇದರ ಪೂರ್ವಭಾವಿಯಾಗಿ ಮನೆಯಲ್ಲಿ ವಿವಿಧ ರೀತಿಯ ಕೆಲಸಗಳನ್ನು ನಡೆಸಲಾಗಿತ್ತು. ಈ ಮಧ್ಯೆ ಜನವರಿ 15 ಹಾಗೂ 21ರ ಮಧ್ಯೆ ಈ ಕಳವು ನಡೆದಿರುವುದಾಗಿ ದೂರಲಾಗಿದೆ. ಚಿನ್ನಾಭರಣ ಕಳವಿಗೀಡಾದ ವಿಷಯ ಮದುವೆ ದಿನದಂದು ಅರಿವಿಗೆ ಬಂದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿಯ ನಿಲೋಫರ್ ಮಹಲ್‌ನಿಂದ ಕಳವು ನಡೆದಿದೆ. ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 7೦೦೦ ರೂ. ಹಾಗೂ ಎರಡು ಡಬ್ಬಿಗಳಲ್ಲಿರಿಸಿದ್ದ ೧೩೦೦ ರೂಪಾಯಿಗಳನ್ನು ಕಳವು ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮನೆಯ ಮಾಲಕಿ ಫಸೀಲ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ರಳೆದ ಶನಿವಾರ ಸಂಜೆಯಿಂದ ಆದಿತ್ಯವಾರ ಬೆಳಗ್ಗೆ 9 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ತಿಳಿಸಲಾಗಿದೆ.







