ಬೆಳ್ಳೂರು: 2023ರಿಂದ ಜ್ಯಾರಿಗೆ ತಂದ ಕ್ಷಯಮುಕ್ತ ಚಟುವಟಿಕೆಗ ಳಿಗಾಗಿ ಪಂಚಾಯತ್‌ಗೆ ಚಿನ್ನದ ಪದಕ ಲಭಿಸಿದೆ. ವಿಶ್ವ ಕ್ಷಯರೋಗ ದಿನವಾದ ನಾಳೆ ಜಿಲ್ಲಾಧಿಕಾರಿ ಈ ಪ್ರಶಸ್ತಿ ಪ್ರದಾನ ಮಾಡುವರು.
2023ರಲ್ಲಿ ‘ಬೆಳ್ಳೂರಿನಲ್ಲಿ ಸೂರ್ಯೋದಯ’ ಎಂಬ ಹೆಸರಲ್ಲಿ ಕ್ಷಯಮುಕ್ತ ಭಾರತ್ ಯೋಜನೆ ಆರಂಭಿಸಲಾಗಿತ್ತು.ಇದರಂಗವಾಗಿ ಆರೋಗ್ಯ ಪಡೆಯನ್ನು ರಚಿಸಿ ತರಬೇತಿ ನೀಡಲಾಗಿತ್ತು. ಇವರು ಹಾಗೂ ಆರೋಗ್ಯ ಕಾರ್ಯಕರ್ತರು ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ತೆರಳಿ ರೋಗ ತಪಾಸಣೆಗಾಗಿ ಸಹಕರಿ ಸಿದ್ದರು. ಜಿಲ್ಲೆಯಲ್ಲಿ ಕ್ಷಯಮುಕ್ತ ಚಟುವಟಿಕೆಗಳನ್ನು ಆರಂಭಿಸಿದ ಪಂಚಾಯತ್‌ಗಳಲ್ಲಿ ಪ್ರಥಮ ಪಂಚಾಯತ್ ಬೆಳ್ಳೂರಾಗಿದೆ. ಇದರ ಆಧಾರದಲ್ಲಿ ಬೆಳ್ಳೂರು ಪಂಚಾಯತ್‌ಗೆ 2023ರಲ್ಲಿ ಕಂಚಿನ ಪದಕ, 2024ರಲ್ಲಿ ಬೆಳ್ಳಿ ಪದಕ ಲಭಿಸಿದೆ. ಈ ಬಾರಿ ಚಿನ್ನದ ಪದಕದ ಮನ್ನಣೆ ಪಂಚಾಯತ್‌ಗೆ ಲಭಿಸಲಿದೆ. ಯೋಜನೆಯಂಗವಾಗಿ ರೋಗಿಗಳಿಗೆ ಪೋಷಕಾಂಶಗಳ ಕಿಟ್ ವಿತರಣೆ, ರೋಗಿಗಳು, ಕುಟುಂಬ ಸದಸ್ಯರಿಗೆ ಉಚಿತ ತಪಾಸಣೆ ಸೌಲಭ್ಯ, ಔಷಧಿ ಒದಗಿಸಲಾಗಿದೆ. ಈ ಯೋಜನೆ ಕ್ಷಯ ಸಂಪೂರ್ಣ ಮುಕ್ತವಾಗು ವವರೆಗೆ ಮುಂದುವರಿಯಲಿದೆ ಯೆಂದು ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದ್ದಾರೆ.







