ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆ ಮತ್ತೆ ಏರುಗತಿಯಲ್ಲಿ ಸಾಗಿದೆ. ಇಂದು ಇತಿಹಾಸದಲ್ಲೇ ಅತ್ಯಧಿಕ ದರದಲ್ಲಿ ಚಿನ್ನದ ವಹಿವಾಟು ನಡೆಯುತ್ತಿದೆ. ಚಿನ್ನದ ಬೆಲೆ 85,000 ದಾಟಿ ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಮಾರುಕಟ್ಟೆಯಲ್ಲಿ ಇಂದು ಪವನ್ ಗೆ 85,360 ರೂ. ಇದೆ. ಇಂದು ಪವನ್ ಗೆ 680 ರೂ. ಏರಿಕೆಯಾಗಿದೆ. ಸೆಪ್ಟೆಂಬರ್ 1 ರಿಂದ ಇಂದಿನವರೆಗೆ ಮಾರುಕಟ್ಟೆಯಲ್ಲಿ 7,720 ರೂ. ಏರಿಕೆ ಕಂಡುಬAದಿ ರುವುದು ಗಮನಾರ್ಹ. ಒಂದು ಗ್ರಾಂ ಚಿನ್ನದ ಬೆಲೆ 10,000 ರೂ.ಗಿಂತ ಹೆಚ್ಚಾಗಿದೆ. ಇಂದು ಒಂದು ಗ್ರಾಂ ಚಿನ್ನಕ್ಕೆ 10,670 ರೂ. ಪಾವತಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರುತ್ತಿದ್ದರೆ, ರೂಪಾಯಿ ವಿನಿಮಯ ದರದ ಕುಸಿತವು ಭಾರತದಲ್ಲಿ ಚಿನ್ನದ ವ್ಯವಹಾರವನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ.ಅಂತರರಾಷ್ಟ್ರೀಯ ಬೆಲೆ ಏರಿಕೆ ಮತ್ತು ರೂಪಾಯಿ ಅಪಮೌಲ್ಯದಿಂದ ಚಿನ್ನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
