ಕಾಸರಗೋಡು: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ತೆಕ್ಕಿಲ್‌ಫೆರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಣೂರು ಭಾಗದಿಂದ ಮಂಗಳೂರಿ ನತ್ತ ಸಾಗುತ್ತಿದ್ದ ಸರಕು ಲಾರಿಯೊಂದು ನಿಯಂತ್ರಣ ತಪ್ಪಿಮಗುಚಿ ಬಿದ್ದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಅಪಘಾ ತದಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಉಂಟಾಗಿಲ್ಲ.
ಇದೇ ಜಾಗದಲ್ಲಿ ಕಳೆದ ಗುರುವಾರ ಸರಣಿ ವಾಹನ ಅಪಘಾತ ನಡೆದಿತ್ತು. ಸರಕು ಲಾರಿಯೊಂದು ಖಾಸಗಿ ಬಸ್ಸಿನ ಹಿಂದುಗಡೆ ಢಿಕ್ಕಿ ಹೊಡೆದು 19 ಮಂದಿ ಪ್ರಯಾಣಿ ಕರು ಗಾಯಗೊಂಡಿದ್ದರು. ಮಾತ್ರವಲ್ಲದೆ ಢಿಕ್ಕಿಯ ಆಘಾತದಿಂದ ಬಸ್‌ನ ಎದುರುಗಡೆ ಇದ್ದ ಇನ್ನೊಂದು ಸರಕು ಲಾರಿಗೂ ಢಿಕ್ಕಿ ಹೊಡೆದಿತ್ತು. ಅದೇ ಜಾಗದಲ್ಲಿ ನಿನ್ನೆ ರಾತ್ರಿ ಈಸರಕು ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಕೇಂದ್ರದಲ್ಲಿ ವಾಹನ ಅಪಘಾತ ಇತ್ತೀಚೆಗಿನಿಂದ ಹೆಚ್ಚಾಗ ತೊಡಗಿದ್ದು ಇದು ಒಂದು ಅಪಘಾತ ಕೇಂದ್ರವಾಗಿ ಮಾರ್ಪಟ್ಟಿದೆ.







