ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಜಾತ್ರೆ ಮಹೋತ್ಸವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ನಡೆಸಿದ ಭರತ ನಾಟ್ಯ ಪ್ರದರ್ಶನ ಕಲಾಭಿಮಾ ನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಬದಿಯಡ್ಕ ಗ್ರಾಮ ಪಂಚಾ ಯತ್ ಪೆರಡಾಲ ೧೩ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕೆ.ಎಂ. ಅಶ್ವಿನಿಯವರು ತುಂಬಿ ತುಳುಕುತ್ತಿದ್ದ ಜನಸಾಗರದ ಮಧ್ಯೆ ಭರತನಾಟ್ಯ ಪ್ರದರ್ಶಿಸಿದ್ದು ಪ್ರೇಕ್ಷಕರು ಚಪ್ಪಾಳೆತಟ್ಟಿ ಅಭಿನಂದಿಸಿ ದರು. ಅಶ್ವಿನಿಯವರು ತನ್ನ ೧೪ನೇ ವಯಸ್ಸಿನಲ್ಲಿ ನೃತ್ಯ ಅಭ್ಯಾಸ ಆರಂಭಿಸಿ ದ್ದರು. ಕುಂಬಳೆ ನಾಟ್ಯ ವಿದ್ಯಾನಿಲ ಯದ ವಿದುಷಿ ಡಾ. ವಿದ್ಯಾಲಕ್ಷ್ಮಿ ಯವರು ಇವರ ಗುರುವಾಗಿದ್ದಾರೆ. ನೃತ್ಯ ಕಲೆಯಲ್ಲಿ ಡಿಪ್ಲೊಮಾ ಗಳಿಸಿರುವ ಅಶ್ವಿನಿ ಬೆಂಗಳೂರು, ಕಾರ್ಕಳ, ಉಡುಪಿ ಸಹಿತ ಕರ್ನಾಟಕದ ಹಲವೆಡೆಗಳಲ್ಲಿ ಈಗಾಗಲೇ ನೃತ್ಯ ಪ್ರದರ್ಶನ ನಡೆಸಿ ದ್ದಾರೆ. ಇವರು ನೃತ್ಯ ಅಧ್ಯಾಪಿಕೆಯೂ ಆಗಿದ್ದಾರೆ.
೨೦೨೦ರಲ್ಲಿ ಕಾಸರಗೋಡು ಬ್ಲೋಕ್ ಪಂಚಾಯತ್ ಪೆರಡಾಲ ಡಿವಿಶನ್‌ನಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ ಅಶ್ವಿನಿಯವರು ಅತೀ ಹೆಚ್ಚು ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಗ್ರಾಮ ಪಂಚಾ ಯತ್‌ನ ೧೩ನೇ ವಾರ್ಡ್‌ನಿಂದ ಸ್ಪರ್ಧಿಸುವ ಇವರು ಈ ಬಾರಿಯೂ ಗೆಲುವಿನ ಪೂರ್ಣ ನಿರೀಕ್ಷೆ ಇರಿಸಿ ದ್ದಾರೆ. ಅಶ್ವಿನಿ ಯವರು ಬದಿಯಡ್ಕ ಕೆವಿಆರ್ ಕಾರ‍್ಸ್‌ನ ಮೆನೇಜರ್ ನೀರ್ಚಾಲು ಮಲ್ಲಡ್ಕದ ಬಾಲಸುಬ್ರಹ್ಮಣ್ಯರ ಪತ್ನಿಯಾಗಿದ್ದಾರೆ.







