ಪೈವಳಿಕೆ: ಕಳೆದ ಜನವರಿ ತಿಂಗಳಲ್ಲಿ ಬಾಯಾರು ಧರ್ಮಡ್ಕದಲ್ಲಿ ಅಸಹಜ ರೀತಿಯಲ್ಲಿ ಅಕ್ರಮಣಕ್ಕೊ ಳಗಾಗಿ ಕಂಡುಬಂದ ಬಳಿಕ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಬಾಯಾರು ಗಾಳಿಯಡ್ಕದ ಲಾರಿ ಚಾಲಕ ಮೊಹ್ಮದ್ ಆಸೀಫ್‌ರ ಸಾವಿನ ಬಗೆಗಿನ ತನಿಖೆಯಲ್ಲಿ ತಿಂಗಳು ಎಂಟು ಆದರೂ ಯಾವುದೇ ಪ್ರಗತಿ ಇಲ್ಲದಿರುವುದು ನಮ್ಮ ರಾಜ್ಯದ ಪೊಲೀಸ್ ಇಲಾಖೆಯ ಸಾಮರ್ಥ್ಯದ ಕೈಗನ್ನಡಿಯಾಗಿದೆಯೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಹೇಳಿದರು. ಈ ವಿಚಾರದಲ್ಲಿ ಸರಕಾರ ತುರ್ತಾಗಿ ಸ್ಪಂದಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡದೇ ಇದ್ದಲ್ಲಿ ಪಕ್ಷ ಚಳವಳಿಗೆ ಸಿದ್ಧರಾಗಬೇಕಾದೀತು ಎಂದು ಅವರು ತಿಳಿಸಿದ್ದಾರೆ. ಪೈವಳಿಕೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಉಪಾಧ್ಯಕ್ಷ ಮೋಹನ ರೈ, ನಾರಾಯಣ ಏದಾರ್,ಬ್ಲೋಕ್ ಕಾರ್ಯದರ್ಶಿ ಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ, ಮಂಡಲ ಪದಾಧಿಕಾರಿಗಳಾದ ಅಬ್ದುಲ್ಲ ಹಾಜಿ,ಸಬ್ರಾಯ ಸಾಯ, ಮುಸ್ತಫ ಮುಳಿಗದ್ದೆ, ಜೀವನ್ ಕ್ರಾಸ್ತ, ನೌಶಾದ್ ಪಟ್ಲ, ಮಹಿಳಾ ಕಾಂಗ್ರೆಸ್ ಮಂಡಲ ಅಧ್ಯಕ್ಷ ಎಲಿಜ ಕ್ರಾಸ್ತ, ಅವಿನಾಶ್, ರಸಾಕ್ ಚೇರಾಲು, ಕಮಲಾಹಾಸನ್, ಮೊದಲಾದವರು ಮಾತನಾಡಿದರು. ತ್ರಿಸ್ತರ ಪಂಚಾಯತ್ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು .ಶಿವರಾಮ ಶೆಟ್ಟಿ ಸ್ವಾಗತಿಸಿ, ಶಾಜಿ ಎನ್.ಸಿ. ವಂದಿಸಿದರು.
