ತಿರುವನಂತಪುರ: ಕೇರಳದ ಎರಡು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿ ಪ್ರಕ್ರಿಯೆಯಿಂದ ಮುಖ್ಯಮಂತ್ರಿ ಯನ್ನು ಹೊರತುಪಡಿಸಬೇಕೆಂದು ಆಗ್ರಹಿಸಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಡಿಜಿಟಲ್ ವಿಶ್ವವಿದ್ಯಾಲಯಗಳ ಉಪಕುಲಪ ತಿಗಳ ನೇಮಕಾತಿಗಾಗಿರುವ ಸರ್ಜ್ ಸಮಿತಿ ಹಾಗೂ ನೇಮಕಾತಿ ಪ್ರಕ್ರಿಯೆಗಳಿಂದ ಮುಖ್ಯಮಂ ತ್ರಿಯನ್ನು ಹೊರತು ಪಡಿಸಬೇಕೆಂಬ ಪ್ರಧಾನ ಬೇಡಿಕೆಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಯಲ್ಲಿ ರಾಜ್ಯಪಾಲರು ಮುಂದಿರಿಸಿದ್ದಾರೆ.
ಉಪಕುಲಪತಿಗಳ ನೇಮಕಾತಿಗಾಗಿ ಸರ್ಜ್ ಸಮಿತಿ ತಯಾರಿಸುವ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕೆಂಬ ನಿರ್ದೇಶವನ್ನು ಈ ಹಿಂದೆ ಸುಪ್ರೀಂಕೋರ್ಟ್ ನೀಡಿತ್ತು. ಆದರೆ ಈ ಪಟ್ಟಿಯನ್ನು ಮುಖ್ಯಮಂ ತ್ರಿಗಲ್ಲ ತನಗೆ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ರಾಜ್ಯಪಾಲರು ಆಗ್ರಹಪಟ್ಟಿದ್ದಾರೆ. ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ನಿರ್ದೇಶಗಳಿಗೆ ಭಿನ್ನ ಸ್ಥಿತಿ ಕೇರಳ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಡಿಜಿಟಲ್ ವಿಶ್ವವಿದ್ಯಾಲಯಗಳಲ್ಲಿ ಇಂದಿದೆ. ಈ ಎರಡು ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳ ನೇಮಕಾತಿಯಲ್ಲಿ ಮುಖ್ಯಮಂತ್ರಿಗೆ ಯಾವುದೇ ರೀತಿಯ ಪಾಲುದಾರಿಕೆಯೂ ಇಲ್ಲ. ಪಶ್ಚಿಮಬಂಗಾಲದಲ್ಲಿರುವುದಕ್ಕಿಂತ ಭಿನ್ನ ಸ್ಥಿತಿ ಇಂದು ಕೇರಳದಲ್ಲಿದೆ. ಆದ್ದರಿಂದ ಉಪಕುಲಪತಿಗಳ ನೇಮಕಾತಿಗಳ ಪ್ರಕ್ರಿಯೆಗಳಿಂದ ಮುಖ್ಯಮಂತ್ರಿಯನ್ನು ಹೊರತುಪಡಿಸಬೇಕು. ಕೇರಳದ ಇಬ್ಬರು ಪ್ರತಿನಿಧಿಗಳು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳ ಇಬ್ಬರು ಪ್ರತಿನಿಧಿಗಳೂ ಸೇರಿದಂತೆ ಐದು ಮಂದಿ ಸದಸ್ಯರು ಒಳಗೊಂಡ ಸರ್ಚ್ ಸಮಿತಿಗೆ ಈ ಹಿಂದೆ ರೂಪು ನೀಡಲಾಗಿತ್ತು. ಆದರೆ ಅದು ಯುಜಿಸಿಯ ನಿಬಂಧನೆಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಸಮಿತಿಯಲ್ಲಿ ಯುಜಿಸಿಯ ಪ್ರತಿ ನಿಧಿಗಳನ್ನು ಒಳಪಡಿಸಬೇಕೆಂಬ ಬೇಡಿಕೆಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ರಾಜ್ಯಪಾಲರು ಮುಂದಿರಿಸಿದ್ದಾರೆ.