ಮಧೂರು ದೇವಸ್ಥಾನ ಸಂದರ್ಶಿಸಿದ ರಾಜ್ಯಪಾಲ ಅರ್ಲೇಕರ್

ಕಾಸರಗೋಡು: ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಿನ್ನೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಂದರ್ಶಿಸಿ ಪ್ರಾರ್ಥನೆ ನಡೆಸಿದರು. ಮಧ್ಯಾಹ್ನ ಪೂಜೆಯ ವೇಳೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲರು  ವಿಶೇಷ ಪೂಜೆ ನಡೆಸಿದರು. ಮಾತ್ರವಲ್ಲ ದೇವಸ್ಥಾನದ ಇತಿಹಾಸದ ಬಗ್ಗೆಯೂ ಅವರು ಸಂಬಂಧಪಟ್ಟವರಿಂದ ಕೇಳಿ ತಿಳಿದರು. ಇನ್ನು ಮುಂದೆಯೂ ಶ್ರೀ ಕ್ಷೇತ್ರಕ್ಕೆ ಆಗಮಿಸುವುದಾಗಿ ತಿಳಿಸಿ ಹಿಂತಿರುಗಿದರು.

ಈ ಹಿಂದೆ ನಡೆದ ಮಧೂರು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರನ್ನು ಆಹ್ವಾನಿಸಲಾಗಿತ್ತಾದರೂ ಕಾರಣಾಂತರಗಳಿಂದ ಅವರು ಆಗಮಿಸಿರಲಿಲ್ಲ. ಶ್ರೀ ಕ್ಷೇತ್ರದ ಪದಾಧಿಕಾರಿಗಳಾದ ಮಂಜುನಾಥ ಕಾಮತ್, ಜಯದೇವ ಖಂಡಿಗೆ, ನಾರಾಯಣ ಮಯ್ಯ, ಮಧೂರು ಪಂ. ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಪಂ. ಸದಸ್ಯ ಎಂ.ಆರ್. ಯೋಗೀಶ್ ಮೊದಲಾದವರು ರಾಜ್ಯಪಾಲರನ್ನು ಶ್ರೀಕ್ಷೇತ್ರಕ್ಕೆ ಸ್ವಾಗತಿಸಿದರು.

RELATED NEWS

You cannot copy contents of this page