ಕಾಸರಗೋಡು: ಅಭಿಮಾನಿಗಳ ಕಾಯುವಿಕೆಗೆ ವಿರಾಮವಿಟ್ಟು ಕಾಂತಾರ ಚಾಪ್ಟರ್ 1 ಥಿಯೇಟರ್ ಗಳಿಗೆ ತಲುಪಿದೆ. ಈ ಸಿನಿಮಾ ಬೋಕ್ಸ್ ಆಫೀಸಿನಲ್ಲಿ ಇತಿಹಾಸ ಸೃಷ್ಟಿಸಬಹು ದೆಂದು ಮೊದಲ ದಿನ ಸಿನಿಮಾ ನೋಡಿದವರು ಅಭಿಪ್ರಾಯ ಪಡುತ್ತಾರೆ. ಚಿತ್ರದಲ್ಲಿ ರಿಷಬ್ ಶೆಟ್ಟಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈಮಧ್ಯೆ ಸಿನಿಮಾವನ್ನು ನೋಡಿ ದರುಶನ ಬಂದ ರೀತಿಯಲ್ಲಿ ವರ್ತಿಸಿದ ಯುವಕನ ವೀಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.
ಸಿನಿಮಾ ಮುಗಿದ ಕೂಡಲೇ ಈತ ಹೊರಬಂದು ನಾಯಕನಟ ನಟಿಸಿದ ರೀತಿಯಲ್ಲೇ ನಟಿಸಿ ನೆಲಕ್ಕೆ ಬಿದ್ದು ಹೊರಳಾಡಿ ಬೊಬ್ಬೆ ಹೊಡೆದಿದ್ದಾನೆ. ಸುಮಾರು ಹೊತ್ತು ಈ ರೀತಿ ವರ್ತಿಸಿದ ಯುವಕನನ್ನು ಬಳಿಕ ಚಿತ್ರಮಂದಿರದವರು ಹಿಡಿದು ಕರೆದುಕೊಂಡು ಹೋಗಿದ್ದಾರೆ. ಪ್ರಚಾರಕ್ಕೆ ಬೇಕಾಗಿ ಹೀಗೆ ಮಾಡಿರುವುದೋ ಅಥವಾ ದೈವ ಈತನ ಶರೀರಕ್ಕೆ ಸೇರಿದೆಯೋ ಎಂಬ ಬಗ್ಗೆ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.