ಚೆರ್ಕಳ: ಸುನ್ನಿ ಮುಖಂಡ ಹಾಜಿ ಚೆರ್ಕಳ ಮೊಹಮ್ಮದ್ (66) ನಿಧನ ಹೊಂದಿದರು. ಚೆರ್ಕಳ ಮುಹಿಯಿ ದ್ದೀನ್ ಜಮಾಯತ್ ಮಸೀದಿ ಸಮಿತಿ ಅಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್ ಮಂಡಲ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಅಬ್ದುಲ್ಲ, ಫಾಸಿಲ್ ಫಿರೋಸ್, ಶಾಸಿನ್ ಶಾಹಿದ್, ರಿಸ್ವಾನ ತಸ್ನೀಂ, ಅಳಿಯಂದಿ ರಾದ ಶೆರೀನ್, ಶೆರೀಫ್, ಸೊಸೆ ಫಸ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






