ಸೀತಾಂಗೋಳಿ: ಸೀತಾಂಗೋಳಿ ಯಲ್ಲಿರುವ ಎಚ್‌ಎಎಲ್ ಕಂಪೆನಿಯ ತಾತ್ಕಾಲಿಕ ನೌಕರನಾದ ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಕುದ್ರೆಪ್ಪಾಡಿ ನಿವಾಸಿ ಶಂಕರ ಪಾಟಾಳಿಯವರ ಪುತ್ರ ಹರಿಕೃಷ್ಣ (22) ಮೃತಪಟ್ಟ ಯುವಕ.
ನಿನ್ನೆ ಸಂಜೆ ಕೆಲಸ ಮುಗಿಸಿ ಹರಿಕೃಷ್ಣ ಮನೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲವೆನ್ನ ಲಾಗಿದೆ. ಹೊರಗೆ ತೆರಳಿದ್ದ ಮನೆಯವರು ಸಂಜೆ ೬ ಗಂಟೆಗೆ ಮನೆಗೆ ಮರಳಿ ತಲುಪಿದಾಗ ಹರಿಕೃಷ್ಣ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಹರಿಕೃಷ್ಣ ನೇಣುಬಿಗಿದು ಸಾವಿಗೀಡಾ ಗಲು ಕಾರಣವೇನೆಂದು ತಿಳಿದಿಲ್ಲ ವೆಂದು ಸಂಬಂಧಿಕರು ತಿಳಿಸುತ್ತಿದ್ದಾರೆ. ಘಟನೆ ಬಗ್ಗೆ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುದ್ರೆಪ್ಪಾಡಿ ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಸಕ್ರಿಯ ಸದಸ್ಯನಾದ ಹರಿಕೃಷ್ಣ ಕಬಡ್ಡಿ ಕ್ರೀಡಾಪಟು ಕೂಡಾ ಆಗಿದ್ದರು. ಇವರ ಅಕಾಲಿಕ ಸಾವು ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ಮೃತರು ತಂದೆ, ತಾಯಿ ರತಿ, ಸಹೋದರ ಕಿರಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.