ಶಬರಿಮಲೆಯಿಂದ ಕದ್ದು ಸಾಗಿಸಿದ್ದು ಅರ್ಧ ಕಿಲೋದಷ್ಟು ಚಿನ್ನ: ಪ್ರಾಯೋಜಕ, ಮುಜರಾಯಿ ಮಂಡಳಿಯ ಅಧಿಕಾರಿಗಳು ಸೇರಿ 11 ಮಂದಿ ಆರೋಪಿಗಳಾಗುವ ಸಾಧ್ಯತೆ

ಶಬರಿಮಲೆಯಿಂದ ಕದ್ದು ಸಾಗಿಸಿದ್ದು ಅರ್ಧ ಕಿಲೋದಷ್ಟು ಚಿನ್ನ: ಪ್ರಾಯೋಜಕ, ಮುಜರಾಯಿ ಮಂಡಳಿಯ ಅಧಿಕಾರಿಗಳು ಸೇರಿ 11 ಮಂದಿ ಆರೋಪಿಗಳಾಗುವ ಸಾಧ್ಯತೆ
ಪತ್ತನಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಿಂದ 474.9 ಗ್ರಾಂ ಚಿನ್ನವನ್ನು ಕದ್ದು ಸಾಗಿಸಲಾಗಿದೆ ಯೆಂದು ಈ ಬಗ್ಗೆ ತನಿಖೆ ನಡೆಸಿದ ದೇವಸ್ವಂ ವಿಜಿಲೆನ್ಸ್ ಎಸ್ಪಿ ರಾಜ್ಯ ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ದ್ವಾರಪಾಲಕ ಮೂರ್ತಿಗಳ ಕವಚಗಳಿಗೆ ಚಿನ್ನ ಲೇಪ ನಡೆಸಿದ ಬಳಿಕ ಬಾಕಿ ಉಳಿದ 474.9 ಗ್ರಾಂ ಚಿನ್ನವನ್ನು ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯ ನಿರ್ದೇಶ ಪ್ರಕಾರ ಕಲ್ಪೇಶ್ ಎಂಬಾತನಿಗೆ ತಾವು ಹಸ್ತಾಂತರಿಸಿದ್ದೆವೆAದು ಕವಚಗಳಿಗೆ ಚಿನ್ನ ಲೇಪನ ನಡೆಸಿದ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ ಎಂಬ ಸಂಸ್ಥೆ ಹೇಳಿಕೆ ನೀಡಿದೆ. ಆದರೆ ಆ ಚಿನ್ನ ದೇವಸ್ವಂ ಮಂಡಳಿಗೆ ಹಸ್ತಾಂತರಿಸಿದ ಬಗ್ಗೆ ಯಾವುದೇ ರೀತಿಯ ದಾಖಲುಪತ್ರಗಳಿಲ್ಲವೆಂದು ಹೈಕೋರ್ಟ್ಗೆ ಸಲ್ಲಿಸಲಾದ ವಿಜಿಲೆನ್ಸ್ ವರದಿಯಲ್ಲಿ ತಿಳಿಸಲಾಗಿದೆ.
ಚಿನ್ನ ಲೇಪಿತ ದ್ವಾರಪಾಲಕ ಮೂರ್ತಿಗಳು ತಾಮ್ರದ ಕವಚಗಳಾಗಿವೆಯೆಂಬ ಹೆಸರಲ್ಲಿ ಹಸ್ತಾಂತರಿಸಿರುವುದು ಅದರಲ್ಲಿದ್ದ ಚಿನ್ನವನ್ನು ಅನುಮತಿಯಿಲ್ಲದೆ ತೆಗೆದು ಅಪಹರಿಸಿರುವುದು ಮೇಲ್ನೋಟಕ್ಕೆ ಒಂದು ಗಂಭೀರ ಆರೋಪವಾಗಿ ದೆಯೆಂದು ಹೈಕೋರ್ಟ್ನ ವಿಭಾಗೀಯ ಪೀಠ ಹೇಳಿದೆ. ಈ ಬಗ್ಗೆ ಎಡಿಜಿಪಿ ಎಚ್. ವೆಂಕಟೇಶ್ ನೇತೃತ್ವದ ವಿಶೇಷ ತನಿಖಾ ತಂಡ ಪ್ರತ್ಯೇಕ ತನಿಖೆ ನಡೆಸಬೇಕೆಂದು ನಿರ್ದೇಶ ನೀಡಿರುವ ಹೈಕೋರ್ಟ್ ಈ ವಿಷಯದಲ್ಲಿ ದೇವಸ್ವಂ ಮಂಡಳಿಯ ವತಿಯಿಂದ ಗಂಭೀರ ಲೋಪದೋಷ ಉಂಟಾಗಿದೆಯೆAದು ಹೇಳಿದೆ.
ಶಬರಿಮಲೆಯ ಪ್ರವೇಶ ಬಾಗಿಲ ಮೆಟ್ಟಿಲಲ್ಲಿ ಈ ಹಿಂದೆ 409 ಗ್ರಾಂ ಚಿನ್ನ ಮತ್ತು ದ್ವಾರಪಾಲಕ ಮೂರ್ತಿಗಳಲ್ಲಿ 579 ಗ್ರಾಂ ಚಿನ್ನ ಸೇರಿದಂತೆ ಒಟ್ಟು 989 ಗ್ರಾಂ ಚಿನ್ನ ಒಳಗೊಂಡಿತ್ತು. ಆದರೆ ದ್ವಾರಪಾಲಕ ಮೂರ್ತಿ ಕವಚನದಲ್ಲಿ ಈಗ 394.9 ಗ್ರಾಂ ಮತ್ತು ಪ್ರವೇಶ ಬಾಗಿಲ ಮೆಟ್ಟಿಲಲ್ಲಿ 184 ಗ್ರಾಂ ಚಿನ್ನ ಮಾತ್ರವೇ ಬಾಕಿ ಉಳಿದುಕೊಂ ಡಿದೆಯೆಂದು ವಿಜಿಲೆನ್ಸ್ ವರದಿಯಲ್ಲಿ ತಿಳಿಸ ಲಾಗಿದೆ. ಆ ಬಗ್ಗೆ ವಿಶೇಷ ತನಿಖೆ ನಡೆಸಬೇಕೆಂದೂ ತನಿಖಾ ವರದಿಯನ್ನು ಆರು ವಾರದೊಳಗಾಗಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶ ನೀಡಿದೆ.
ಇಂತಹ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ, ದೇವಸ್ವಂ ಮಂಡಳಿಯ ಕೆಲವು ಸಿಬ್ಬಂದಿಗಳು ಸಿಕ್ಕಿ ಬೀಳುವ ಸಾಧ್ಯತೆ ಇದೆ. ಅವ್ಯವಹಾರದ ಬಗ್ಗೆ ದೇವಸ್ವಂ ಮಂಡಳಿ ಆಯುಕ್ತರು ಇಂದು ವಿದ್ಯುಕ್ತವಾಗಿ ದೂರು ಸಲ್ಲಿಸಿದ್ದು ಅದರಂತೆ ಉಣ್ಣಿಕೃಷ್ಣನ್ ಪೋತ್ತಿ ಮತ್ತು ದೇವಸ್ವಂ ಮಂಡಳಿ ಸಿಬ್ಬಂದಿಗಳು ಸೇರಿ 11 ಮಂದಿಯನ್ನು ಆರೋಪಿಗಳನ್ನಾಗಿ ಕೇಸು ದಾಖಲಿಸುವ ಸಾಧ್ಯತೆ ಇದೆ. ಇದೇ ಸಂದರ್ಭಧಲ್ಲಿ ಶಬರಿಮ ಲೆಯ ಚಿನ್ನ ಮತ್ತಿತರ ಅಮೂಲ್ಯ ವಸ್ತುಗಳ ಬಗ್ಗೆ ಲೆಕ್ಕಾಚಾರ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ನೇಮಿಸಿದ ಅಮಿಕಸ್ ಕ್ಯೂರಿ ನ್ಯಾಯಮೂರ್ತಿ ಕೆ.ಟಿ. ಶಂಕರನ್ ಇಂದು ಬೆಳಿಗ್ಗೆ ಶಬರಿಮಲೆಗೆ ಆಗಮಿಸಿ ಅಮೂಲ್ಯ ವಸ್ತುಗಳ ಲೆಕ್ಕಾಚಾರ ಆರಂಭಿಸಿದ್ದಾರೆ. ಅವರು ನಾಳೆ ಶಬರಿಮಲೆ ಕ್ಷೇತ್ರದ ದ್ವಾರಪಾಲಕ ಮೂರ್ತಿಗಳ ಮತ್ತು ಸೋಮವಾರದಂದು ಆರ್ಮುಳಂನಲ್ಲಿರುವ ಶಬರಿಮಲೆಯ ಪ್ರಧಾನ ಸ್ಟ್ರಾಂಗ್ ರೂಂ ಪರಿಶೀಲಿಸುವರು.

You cannot copy contents of this page