ಕಂಗುಮೆಯಲ್ಲಿ ಹನುಮಾನ್ ಜಯಂತಿ ಆಚರಣೆ

ಮಂಜೇಶ್ವರ: ಮೂಡಂಬೈಲು ಕಂಗುಮೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ವೀರಾಂಜನೇಯ ಮಂದಿರದ ಸ್ಥಳದಲ್ಲಿ ಹನುಮಾನ್ ಜಯಂತಿ ಕಾರ್ಯಕ್ರಮ ನಡೆಯಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಅವರು ದೀಪ ಪ್ರಜ್ವಲನೆಗೊಳಿಸಿ ಆಶೀರ್ವಚನ ನೀಡಿದರು. ಗುಡ್ಡಕ್ಕೇರಿ ಶ್ರೀ ಕಲ್ಪವೃಕ್ಷ ಮಹಾಮಾಯ ಭಜನಾ ಮಂಡಳಿ ವತಿಯಿಂದ ಹನುಮಾನ್ ಚಾಲೀಸ್ ಪಾರಾಯಣ, ಸ್ಥಳೀಯರಿಂದ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳದಾನಿ ಪಿ.ಆರ್. ಶೆಟ್ಟಿ ಕುಳೂರು, ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಆಚಾರ್ಯ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೋಹನ್ ಮಜ್ಜಾರ್, ತಾರನಾಥ ಗುರಿಕ್ಕಾರರು, ದಾಮೋದರ ಶೆಟ್ಟಿ, ರಾಮ್ ಪ್ರಕಾಶ್ ಆಳ್ವ, ನಾಗರಾಜ ಪದಕಣ್ಣಾಯ, ಮಹಿಳಾ ಸಂಘದ ಗೌರವಾಧ್ಯಕ್ಷೆ ಬಿ.ಎಂ. ಆಶಾಲತಾ ಉಪಸ್ಥಿತರಿದ್ದರು. ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಸಮಿತಿ ಕಾರ್ಯದರ್ಶಿ ಬಾಬು ಶೆಟ್ಟಿಗಾರ್ ವಂದಿಸಿದರು.

You cannot copy contents of this page