ಬಾಲಕಿಗೆ ಕಿರುಕುಳ: ಕುಂಬಳೆ ಆಟೋ ಚಾಲಕ ಪೋಕ್ಸೋ ಪ್ರಕಾರ ಬಂಧನ

ಕುಂಬಳೆ: 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆಟೋ ಚಾಲಕನನ್ನು ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. ಕುಂಬಳೆಯ ಆಟೋ ಚಾಲಕ ಬಾವಲಿಮನ ಅಮೀರ್ ಮಂಜಿಲ್‌ನ ಅಬುತಾಹಿರ್ (22) ಎಂಬಾತನನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಪಿ. ವಿಜೀಶ್ ಬಂಧಿಸಿದ್ದಾರೆ.  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ೧೭ರ ಹರಯದ ಬಾಲಕಿಗೆ 2022-2023ನೇ ಕಾಲಾವಧಿಯಲ್ಲಿ ಕಿರುಕುಳ ನೀಡಿದ ಪ್ರಕರಣದಲ್ಲಿ ಅಬುತಾಹಿರ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತ ಎರಡು ದಿನಗಳೊಳಗೆ ಗಲ್ಫ್‌ಗೆ ತೆರಳಲಿರುವ ಸಿದ್ಧತೆಯಲ್ಲಿದ್ದನೆಂದೂ ಹೇಳಲಾಗುತ್ತಿದೆ. ಇತ್ತೀಚೆಗೆ ಬಾಲಕಿಗೆ ಅಸ್ವಸ್ಥತೆ ಕಂಡುಬಂದಿತ್ತೆನ್ನಲಾಗಿದೆ.  ಅಲ್ಲದೆ  ಬಾಲಕಿಯ ಫೋನ್ ಮನೆಯವರು ಪರಿಶೀಲಿಸಿದ್ದು ಈ ವೇಳೆ ಅಬುತಾಹಿರ್ ಎಂಬ ವ್ಯಕ್ತಿಯೊಂದಿಗೆ ನಿರಂತರ ಚಾಟಿಂಗ್‌ನಲ್ಲಿರುವುದು ಕಂಡುಬಂದಿತ್ತು. ಅನಂತರ  ಬಾಲಕಿಯನ್ನು ಕೌನ್ಸಿಲಿಂಗ್‌ಗೊಳ ಪಡಿಸಿದಾಗ ಕಿರುಕುಳಕ್ಕೊಳಗಾದ ವಿಷಯ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದು ಇದರಂತೆ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page