ತೃಶೂರು: ಆದಿರಪಳ್ಳಿಯಲ್ಲಿ ಬಿಎಫ್‌ಒಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಯನ್ನು ಬಂಧಿಸಲಾಗಿದೆ. ಬುಡಕಟ್ಟು ಜನಾಂಗ ಮಹಿಳಾ ಫಾರೆಸ್ಟ್ ವಾಚರ್‌ಗೆ ಕಿರುಕುಳ ನೀಡಿದ ಆರೋಪದಂತೆ ಪಿ.ಪಿ. ಜೋನ್ಸನ್ ಎಂಬಾತನನ್ನು ಸೆರೆಹಿಡಿಯಲಾಗಿದೆ.
ಮುಕ್ಕಂಪುಳ ಎಂಬಲ್ಲಿಂದ ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜೋನ್ಸನ್ ವರ್ಗಾವಣೆಗೊಂಡು ಬಂದ ಮೊದಲ ದಿನವೇ ಮಹಿಳಾ ವಾಚರ್‌ಗೆ ಕಿರುಕುಳ ನೀಡಿರುವು ದಾಗಿ ದೂರಲಾಗಿದೆ. ಘಟನೆ ಬಳಿಕ ಜೋನ್ಸನ್ ತಲೆಮರೆಸಿ ಕೊಂಡಿದ್ದನು. ಚಾಲಕ್ಕುಡಿ ಡಿವೈಎಸ್‌ಪಿ ನೇತೃತ್ವದ ತಂಡ ಈತನನ್ನು ಬಂಧಿಸಿದೆ. ಅಕ್ಟೋಬರ್ ೬ರಂದು ಪ್ರಕರ ಣಕ್ಕೆ ಕಾರಣವಾದ ಘಟನೆ ನಡೆ ದಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಮಹಿಳೆ ಯರ ವಿರುದ್ಧದ ಅತಿಕ್ರಮಣ ತಡೆಯಲಿ ರುವ ಕಠಿಣ ಕಾಯ್ದೆಗಳನ್ನು ಹೇರಿ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದರು. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.