ಕಾಸರಗೋಡು: ಅಶ್ಲೀಲ ವೀಡಿಯೋ ತೋರಿಸಿ ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ 77 ವರ್ಷಕಠಿಣ ಸಜೆ ಹಾಗೂ 2,09,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮುಳಿಯಾರು ಮಲ್ಲ ನಿವಾಸಿ ಕೊಳಂಕೋಡ್ ಹೌಸ್‌ನ ಕೆ. ಸುಕುಮಾರನ್ (45) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್ ಈ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ದಂಡ ಪಾವತಿಸದಿದ್ದಲ್ಲಿ 2 ವರ್ಷ ಹಾಗೂ 7 ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ.
೨೦೨೩ ಜೂನ್ ೨೫ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಲ್ಲಿಗೆ ತಲುಪಿದ ಆರೋಪಿಯು ಅಶ್ಲೀಲ ವೀಡಿಯೋ ತೋರಿಸಿ ಬಾಲಕಿಗೆ ಕಿರುಕುಳ ನೀಡಿದ್ದಾ ನೆನ್ನಾಗಿದೆ. ಈ ವಿಷಯವನ್ನು ಬಹಿ ರಂಗಪಡಿಸಿದರೆ ಕೊಲೆಗೈಯ್ಯುವು ದಾಗಿಯೂ ಬಾಲಕಿಗೆ ಬೆದರಿಕೆಯೊಡ್ಡಿ ರುವುದಾಗಿ ದೂರಲಾಗಿತ್ತು. ಆದೂರು ಪೊಲೀಸರು ದಾಖಲಿಸಿ ಕೊಂಡ ಈ ಪ್ರಕರಣದ ಬಗ್ಗೆ ಅಂದಿನ ಇನ್‌ಸ್ಪೆಕ್ಟರ್ ಎ. ಅನಿಲ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ಪ್ರೋಸಿಕ್ಯೂಶನ್ ಪರವಾಗಿ ಹೊಸದುರ್ಗ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ. ಗಂಗಾಧರನ್ ವಾದಿಸಿದ್ದಾರೆ.