ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಕೊಚ್ಚಿ: ಪ್ರಾಯಪೂರ್ತಿ ಯಾಗದ ಇಬ್ಬರು ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ಸೆರೆಗೀಡಾಗಿದ್ದಾನೆ. ಕಾಸರಗೋಡು ನಿವಾಸಿಯೆನ್ನಲಾದ  ಅಬ್ದುಲ್ ರಜಾಕ್ (38) ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಹೇಳಲಾ ಗುತ್ತಿದೆ. ಈತ  ಪೆರುಂಬಾವೂರಿನ ಬಾಡಿಗೆ ಮನೆಯಲ್ಲಿ ವಾಸಿಸಿ ಡ್ರೈವಿಂಗ್  ಸಹಿತ ವಿವಿಧ ಕೆಲಸ ನಿರ್ವಹಿಸುತ್ತಿದ್ದನು. ಈ ಮಧ್ಯೆ ಅನ್ಯ ರಾಜ್ಯ ಕಾರ್ಮಿಕರ ಕುಟುಂಬ ವೊಂದರ 12 ಹಾಗೂ 9 ವರ್ಷ ಪ್ರಾಯದ ಇಬ್ಬರು  ಬಾಲಕಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಅಬ್ದುಲ್ ರಜಾಕ್ ವಾಸಿಸುತ್ತಿದ್ದ ಬಾಡಿಗೆ ಮನೆ ಸಮೀಪದ ಕಟ್ಟಡದಲ್ಲಿ ಅನ್ಯರಾಜ್ಯ ಕಾರ್ಮಿಕ ಕುಟುಂಬ ವಾಸಿಸುತ್ತಿದೆ.  

ಬಾಲಕಿಯರ ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಆರೋಪಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಅಲ್ಲದೆ  ಕಿರುಕುಳದ ದೃಶ್ಯವನ್ನು ಆತ ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದನ್ನೆಲಾಗಿದೆ. ಆತನ ಸ್ನೇಹಿತನಿಗೆ ಈ ಕುರಿತಾಗಿ ಸಂಶಯ ಉಂಟಾಗಿದ್ದು, ಆತ  ಚೈಲ್ಡ್ ವೆಲ್ಫೇರ್ ಕಮಿಟಿಗೆ ಮಾಹಿತಿ ನೀಡಿದ್ದನು. ಸಿಡಬ್ಲ್ಯುಸಿ ನೀಡಿದ ವರದಿಯ ಆಧಾರದಲ್ಲಿ  ಬಾಲಕಿಯರ ಹೇಳಿಕೆ ದಾಖಲಿಸಿಕೊಂಡಾಗ ಕಿರುಕುಳ  ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ  ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ  ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಇನ್ ಸ್ಪೆಕ್ಟರ್ ಎಲ್. ಅನಿಲ್ ಕುಮಾರ್,ಎಸ್‌ಐಗಳಾದ ಪ್ರವೀಣ್‌ಪ್ರಕಾಶ್, ಎಎಸ್‌ಐಗಳಾದ ರತೀಶನ್, ಎಂ.ಬಿ. ಸುಬೈರ್, ಸೀನಿಯರ್ ಸಿಪಿಒಗಳಾದ ಜಿಜಿ ಮೋನ್, ಮೊಹಮ್ಮದ್ ಶಾನ್, ಸಿಪಿಒಗಳಾದ ಎನ್.ಪಿ. ಬಿಂದು, ಟಿ.ಕೆ. ಸಂಧ್ಯಾ ಎಂಬಿವರನ್ನೊಳ ಗೊಂಡ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಆರೋಪಿಯನ್ನು ಸೆರೆಹಿಡಿಯಲು ಸಾಧ್ಯವಾಗಿದೆ.

You cannot copy contents of this page