ಕಣ್ಣೂರು: ಸುಮಾರು ಅರ್ಧ ಕಿಲೋ ಹ್ಯಾಶಿಶ್ ಆಯಿಲ್ ಸಹಿತ ಯುವಕ ಸೆರೆಯಾಗಿದ್ದಾನೆ. ತೃಶೂರು ನಿವಾಸಿ ಸಿ.ಎಸ್. ನಿಜಿಲ್ (20)ನನ್ನು ಅಬಕಾರಿ ತಂಡ ಸೆರೆ ಹಿಡಿದಿದೆ. ರಹಸ್ಯ ಮಾಹಿತಿ ಆಧಾರದಲ್ಲಿ ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಕಚೇರಿಯ ಸರ್ಕಲ್ ಇನ್ಸ್‌ಪೆಕ್ಟರ್ ಕೆ. ಅಬ್ದುಲ್ ಅಶ್ರಫ್‌ರ ನೇತೃತ್ವದಲ್ಲಿ ಕಣ್ಣೂರು ಹಳೆ ಬಸ್ ನಿಲ್ದಾಣದ ವಸತಿ ಗೃಹದಿಂದ ನಿಜಿಲ್‌ನನ್ನು ಸೆರೆ ಹಿಡಿಯಲಾಗಿದೆ. ಕಣ್ಣೂರು ಭಾಗಕ್ಕೆ ಹ್ಯಾಶಿಶ್ ಆಯಿಲ್ ರಖಂ ಆಗಿ ತಲುಪಿಸುವ ತಂಡದ ಪ್ರಧಾನ ಕೊಂಡಿ ಈತನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಆರ್.ಪಿ. ಅಬ್ದುಲ್ ನಾಸರ್, ಪಿ. ಅನಿಲ್ ಕುಮಾರ್, ಪಿ.ಕೆ. ಪ್ರಮೋದ್ ಮೊದಲಾದವರು ಕಾರ್ಯಾಚರಣೆ ನಡೆಸಿದ್ದಾರೆ.






