ಶಿವಗಿರಿಯಲ್ಲಿ ಅಪಾಯ ಆಹ್ವಾನಿಸುವ ವಿದ್ಯುತ್ ಕಂಬ: ಸ್ಥಳೀಯರಲ್ಲಿ ಆತಂಕ

ಪೆರ್ಲ: ವಿದ್ಯುತ್ ಕಂಬವೊಂದು ಯಾವುದೇ ಕ್ಷಣ ಉರುಳಿ ಬಿದ್ದು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಇದು ಸ್ಥಳೀಯರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪೆರ್ಲ ಗುಂಡ್ಯಡ್ಕ ಶಿವಗಿರಿ ಕನ್ಯಾರುಮೂಲೆ ಸಂಪರ್ಕ ರಸ್ತೆಯ ಅಪ್ಪಯಮೂಲೆ ಶಿವಗಿರಿ ಮಧ್ಯೆ ರಸ್ತೆ ಬದಿ ಈ ಕಂಬ ನಿಂತಿದೆ. ಕಂಬದ ಬುಡದಿಂದ ಮಣ್ಣು ಕುಸಿದಿದ್ದು, ಇನ್ನಷ್ಟು ಮಣ್ಣು ಕುಸಿಯುವ ಸಾಧ್ಯತೆ ಇದೆ. ವಿದ್ಯುತ್ ಕಂಬ ಕುಸಿದು ಬಿದ್ದರೆ ಕೆಳ ಭಾಗದಲ್ಲಿರುವ ಮನೆಗಳ  ಮೇಲೆ ವಿದ್ಯುತ್ ತಂತಿಗಳು ಬೀಳುವ ಅಪಾಯ ಕಂಡು ಬರುತ್ತಿದೆ. ದೊಡ್ಡ ದುರಂತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ವಿದ್ಯುತ್ ಕಂಬವನ್ನು ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ

You cannot copy contents of this page