ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಗಂಡಸಿನ ಮೃತದೇಹ ಪತ್ತೆ: ನಿಗೂಢತೆ, ಸಮಗ್ರ ತನಿಖೆ ಆರಂಭ

ಕಾಸರಗೋಡು: ಕಾಸರಗೋಡು ಲೈಟ್ ಹೌಸ್ ಬಳಿಯ ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಅಪರಿಚಿತ ಗಂಡಸಿನ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.

 ಮೃತದೇಹ ನಗ್ನವಾಗಿ ಕವುಚಿ ಬಿದ್ದ ಸ್ಥಿತಿಯಲ್ಲಿತ್ತು. ಇಂದು ಬೆಳಿಗ್ಗೆ ಮೀನುಗಾರಿಕೆಗೆ  ತೆರಳಿದ ಬೆಸ್ತರಿಗೆ  ಮೃತದೇಹ ಕಂಡುಬಂದಿದೆ.  ಅವರು ನೀಡಿದ ಮಾಹಿತಿಯಂತೆ  ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ಈ ವ್ಯಕ್ತಿ  ಮೃತಪಟ್ಟಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ  ವ್ಯಕ್ತಿಸಮುದ್ರಕ್ಕೆ ಬಿದ್ದರೆ  ಮೃತದೇಹ ಸಮುದ್ರದಲ್ಲಿ ಒಂದೂವರೆ ತಿಂಗಳೊಳಗೆ ಪೂರ್ಣವಾಗಿ ಜೀರ್ಣಿಸುವುದಿಲ್ಲ. ಮಾತ್ರವಲ್ಲದೆ ರುಂಡ ದೇಹದಿಂದ ಬೇರ್ಪಡುವ ಸಾಧ್ಯತೆಯೂ ಇಲ್ಲ.

ಸಮುದ್ರದಲ್ಲಿ ಮೃತದೇಹದ ಭಾಗವನ್ನು ಮೀನುಗಳು ತಿನ್ನುವ ಸಾಧ್ಯತೆ ಇದೆ. ಆದರೆ ರುಂಡ ಬೇರ್ಪಡುವುದಿಲ್ಲವೆಂದು  ಬೆಸ್ತರು ಹೇಳುತ್ತಿದ್ದಾರೆ.  ಇಂದು  ಪತ್ತೆಯಾದ ಮೃತದೇಹದ ರುಂಡ ಇಲ್ಲದಿರುವುದು ನಿಗೂಢತೆಗೆ ದಾರಿಮಾಡಿಕೊಟ್ಟಿದೆ.   ಅದನ್ನು ಭೇದಿಸಲು ಪೊಲೀಸರು  ಕ್ರಮ ಆರಂಭಿಸಿದ್ದಾರೆ. ಮೃತದೇ ಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿಯಬ ಹುದೆಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಭಾಗದಿಂದ ಮೃತದೇಹ ಸಮುದ್ರದಲ್ಲಿ ತೇಲಿ ಬಂದು ಇಲ್ಲಿ ದಡ ಸೇರಿರಬಹು ದೆಂದು ಪೊಲೀಸರು ಹೇಳುತ್ತಿದ್ದಾರೆ. ಮೃತದೇಹ ಪತ್ತೆಯಾದ ವಿಷಯ ತಿಳಿದು ಭಾರೀ ಸಂಖ್ಯೆಯ ಜನರು ಅಲ್ಲಿಗೆ ತಲುಪಿದ್ದರು.

You cannot copy contents of this page