ಕಾಸರಗೋಡು: ಬಿಜೆಪಿ ಜಿಲ್ಲಾಹೆಲ್ಪ್ ಡೆಸ್ಕ್ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದ ಆರೋಗ್ಯ ವಿಮೆ ಶಿಬಿರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಅವರು ಮಾತನಾಡಿ ಅಂಚೆ ಕಚೇರಿಗಳನ್ನು ಬ್ಯಾಂಕ್ಗಳಿಗೆ ಸಮಾನವಾದ ಸೇವೆ ನೀಡಲು ಪ್ರಾಪ್ತಿಗೊಳಿಸಿದ್ದು, ನರೇಂದ್ರ ಮೋದಿ ಸರಕಾರವಾಗಿದೆ ಎಂದು ನುಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್. ಬಾಬುರಾಜ್, ಪಿ.ಆರ್. ಸುನಿಲ್ ಜಿಲ್ಲಾ ಉಪಾಧ್ಯಕ್ಷ ಡಿ. ಶಂಕರ, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯ್ಕ್, ಬಿ.ಪಿ.ಇ.ಎಫ್ ಕಾಸರಗೋಡು ಡಿವಿಶನ್ ಅಧ್ಯಕ್ಷ ಮೋಹನನ್ ಪಿ.ಕೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಕ್ಸಿಕ್ಯೂಟಿವ್ ರಂಜು, ಹೆಲ್ಪ್ಡೆಸ್ಕ್ ಸದಸ್ಯರಾದ ರತೀಶ್, ತೇಜಶ್ರೀ ಮಾತನಾಡಿದರು. ಇದೇ ವೇಳೆ ವಿಜಿಲೆನ್ಸ್ ತಿಳುವಳಿಕೆ ಶಿಬಿರ ಜರಗಿತು. ಶಿಬಿರದಲ್ಲಿ ೬೦ರಷ್ಟು ಮಂದಿ ಹೆಲ್ತ್ ಇನ್ಶೂರೆನ್ಸ್, ಕುಸನ್ಯ ಸಮೃದ್ಧಿ ಯೋಜನೆ ಫಲಾನುಭವಿಗಳಾಗಿ ಆಯ್ಕೆಯಾದರು.







