ಆರೋಗ್ಯ ಸಚಿವೆ ವೀಣಾ ಜೋರ್ಜ್ ಇಂದು ಜಿಲ್ಲೆಯಲ್ಲಿ: ಉಕ್ಕಿನಡ್ಕದಲ್ಲಿ ಮೆಡಿಕಲ್ ಕಾಲೇಜು ಪ್ರವೇಶೋತ್ಸವ ಉದ್ಘಾಟನೆ

ಕಾಸರಗೋಡು:  ಕಾಸರಗೋಡು ಮೆಡಿಕಲ್ ಕಾಲೇಜು ನಿರ್ಮಾಣ ಪೂರ್ತಿಗೊಳಿಸಲು ಸರಕಾರ ೫೬ ಕೋಟಿ ರೂಪಾಯಿ ಮಂಜೂರು ಮಾಡಿರುವು ದಾಗಿ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್  ತಿಳಿಸಿದ್ದಾರೆ.  ಇಂದು ಬೆಳಿಗ್ಗೆ ಉಕ್ಕಿನಡ್ಕದಲ್ಲಿ ಕಾಸರ ಗೋಡು ಮೆಡಿಕಲ್ ಕಾಲೇಜಿನ ಪ್ರವೇಶೋತ್ಸವ ವನ್ನು   ಉದ್ಘಾಟಿಸಿ  ಸಚಿವೆ ಮಾತನಾಡಿದರು.  ಮೆಡಿಕಲ್ ಕಾಲೇಜಿಗೆ ಅಗತ್ಯವುಳ್ಳ ಕಟ್ಟಡಗಳ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳೊಳಗೆ ಪೂರ್ತಿಗೊಳಿಸಲಾಗುವುದು. ಇಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಪೂರ್ತಿಗೊಂಡ ತಕ್ಷಣ ಚೆರ್ಕಳದಲ್ಲಿ ರುವ ಹಾಸ್ಟೆಲ್ ಇಲ್ಲಿಗೆ ಸ್ಥಳಾಂತರಿಸುವುದಾಗಿಯೂ ಸಚಿವೆ ತಿಳಿಸಿದ್ದಾರೆ.  ಕಾರ್ಯಕ್ರಮದಲ್ಲಿ  ಶಾಸಕ ಎನ್.ಎ. ನೆಲ್ಲಿಕುನ್ನು  ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಸ್ವಾಗತಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ದ್ದರು.   ಕೆ.ವಿ. ವಿಶ್ವನಾಥನ್ ವರದಿ ಮಂಡಿಸಿದರು. ಶಾಸಕರಾದ  ಸಿ.ಎಚ್.ಕುಂಞಂಬು, ಎಕೆಎಂ ಅಶ್ರಫ್,  ಕೆಡಿಪಿ ಸ್ಪೆಷಲ್ ಆಫೀಸರ್ ಚಂದ್ರನ್ ವಿ ಮೊದಲಾದವರು ಉಪಸ್ಥಿತರಿದ್ದರು.  ಬಳಿಕ ಪುತ್ತಿಗೆ ಕುಟುಂಬಾರೋಗ್ಯ ಕೇಂದ್ರ ಕಟ್ಟಡ, ಬಾಯಾರು ಕುಟುಂಬಾರೋಗ್ಯ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸುವರು. ಮಧ್ಯಾಹ್ನ ಆರಿಕ್ಕಾಡಿ ಕುಂಬಳ ಕುಟುಂಬಾರೋಗ್ಯ ಕೇಂದ್ರ ಕಟ್ಟಡವನ್ನು ಉದ್ಘಾಟಿಸುವರು. ಅಪರಾಹ್ನ ೨.೩೦ಕ್ಕೆ ಕಲೆಕ್ಟರೇಟ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ

ಮೆಡಿಕಲ್ ಕಾಲೇಜು ಪ್ರವೇಶೋತ್ಸವಕ್ಕೆ ಬಿಜೆಪಿ ಪ್ರತಿನಿಧಿಯನ್ನು ಆಮಂತ್ರಿಸದೆ ಅವಗಣನೆ

ಬದಿಯಡ್ಕ: ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜು ಪ್ರವೇಶೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಪ್ರತಿನಿಧಿಗಳನ್ನು ಆಹ್ವಾನಿಸದಿರುವುದರ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಮೆಡಿಕಲ್ ಕಾಲೇಜು ನೆಲೆಗೊಂಡಿರುವ ಪ್ರದೇಶವನ್ನೊಳ ಗೊಂಡ ಜಿಲ್ಲಾ ಪಂಚಾಯತ್ ಡಿವಿಷನ್‌ನ ಸದಸ್ಯೆಯಾದ ಬಿಜೆಪಿಯ ಶೈಲಜಾ ಭಟ್‌ರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಲಿಲ್ಲವೆಂದು ಬಿಜೆಪಿ ದೂರಿದೆ. ನಾಡಿಗೆ ಹೆಮ್ಮೆಯಾಗಿರುವ ಸರಕಾರಿ ಸಂಸ್ಥೆಯೊಂದರ ಆರಂಭದಲ್ಲೇ ಸರಕಾರ ಪಕ್ಷಪಾತ ನೀತಿ ಅನುಸರಿಸಿದೆ. ಈ ಪ್ರದೇಶದಲ್ಲಿ ಸ್ವಾಧೀನವುಳ್ಳ ಪಕ್ಷದ ಪ್ರತಿನಿಧಿಯನ್ನು ಕಾರ್ಯಕ್ರಮಕ್ಕೆ ಆಮಂತ್ರಿಸದಿರುವುದು ದೌರ್ಭಾಗ್ಯ ಕರವಾಗಿದೆ.  

You cannot copy contents of this page