ಕುಬಣೂರು ರಸ್ತೆಯಲ್ಲಿ ತ್ಯಾಜ್ಯ ರಾಶಿ: ದುರ್ವಾಸನೆ ಸಮಸ್ಯೆ

ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವುದು ವ್ಯಾಪಕಗೊಂಡಿದ್ದು, ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಾತ್ರಿ ಹೊತ್ತಲ್ಲಿ ವಾಹನಗಳಲ್ಲಿ ತಂದು ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ.
ಮಳೆಗೆ ತ್ಯಾಜ್ಯ ದುರ್ವಾಸನೆ ಯಿಂದ ಪರಿಸರ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, ಇದನ್ನು ಊರವರು ಪ್ರತಿಭಟಿಸಿದ್ದರು. ಇದೀಗ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿರು ವುದು ಸ್ಥಳೀಯರಲ್ಲಿ ಸಮಸ್ಯೆಗೆ ಕಾರಣವಾಗಿದೆ. ಸಂಬAಧ ಪಟ್ಟ ಅಧಿಕಾರಿಗಳು ತ್ಯಾಜ್ಯ ಉಪೇಕ್ಷಿಸು ವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page