ಕಾಸರಗೋಡು: ಖಾಸಗಿ ಪಾಮೋ ಯಿಲ್ ಕಂಪೆನಿಯ ಕಾಸರಗೋಡು ಸೇಲ್ಸ್ ಎಕ್ಸಿಕ್ಯೂಟಿವ್ ಹೃದಯಾಘಾತ ದಿಂದ ನಿಧನ ಹೊಂದಿದರು. ಕಾಸರ ಗೋಡು ಬೀಚ್ ರಸ್ತೆ ಪೈ ಕಪೌಂಡ್‌ನ ದಿ| ಜಯರಾಮ ಪೈಯವರ ಪುತ್ರ ವೆಂಕಟೇಶ್ ಪೈ (42) ನಿಧನ ಹೊಂದಿ ದವರು. ನಿನ್ನೆ ಮುಂಜಾನೆ ೪.೩೦ರ ವೇಳೆ ವಾಂತಿಯುಂಟಾಗಿ ಅಸ್ವಸ್ಥಗೊಂಡಿ ದ್ದರು. ಕೂಡಲೇ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ತಾಯಿ ಗೀತಾ ಪೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರ ಸುನಿಲ್ ಪೈ ಈ ಹಿಂದೆ ನಿಧನ ಹೊಂದಿದ್ದಾರೆ.






