ಭಾರೀ ಮಳೆ: ರೈಲು ಹಳಿಗೆ ಮಣ್ಣು ಬಿದ್ದು ಹಳಿತಪ್ಪಿದ ಇಂಜಿನ್

ತಿರುವನಂತಪುರ: ಪಾರಶಾಲಾದಲ್ಲಿ ರೈಲ್ವೇ ಹಳಿಗೆ ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ ರೈಲಿನ ಇಂಜಿನ್ ಹಳಿತಪ್ಪಿದೆ. ಬಿಲಾಸ್‌ಪುರ್- ತಿರುನಲ್ವೇ ಲಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೆ ತುತ್ತಾಗಿದೆ. ಇಂದು ಮುಂಜಾನೆ 2 ಗಂಟೆ ವೇಳೆ ಹಳಿಗೆ ಮಣ್ಣು ಬಿದ್ದಿದೆ. ಈ ಸಮಯ ಆ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲಿನ ಇಂಜಿನ್‌ನ 4 ಚಕ್ರಗಳು ಹಳಿ ತಪ್ಪಿವೆ. ಆದರೆ ಯಾರಿಗೂ ಗಾಯ ಉಂಟಾಗಿಲ್ಲ. ಭಾರೀ ಮಳೆ ಹಿನ್ನೆಲೆಯಲ್ಲಿ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣು ತೆರವು ಗೊಳಿಸಲಿರುವ ಯತ್ನ ಮುಂದುವರಿಯುತ್ತಿದೆ. ಘಟನೆಯಿಂದಾಗಿ ಮೂರು ರೈಲುಗಳ ಸಂಚಾರ ಮೊಟಕುಗೊಳಿಸಲಾಗಿದೆ.

RELATED NEWS

You cannot copy contents of this page