ಕಾಸರಗೋಡು: ಕಾಸರಗೋಡು ಸೇರಿದಂತೆ ಏಳು ಜಿಲ್ಲೆಗಳ ಸ್ಥಳೀಯಾ ಡಳಿತ ಸಂಸ್ಥೆಗಳ ಚುನಾವಣೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಹೆಚ್ಚಿನ ಎಲ್ಲೆಡೆಗಳಲ್ಲಿ ಇಂದು ಬೆಳಿಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ.
ಕಾಸರಗೋಡಿನ ಹೊರತಾಗಿ ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತೃಶೂರು ಎಂಬೀ ಏಳು ಜಿಲ್ಲೆಗಳ ಒಟ್ಟು 604 ಸ್ಥಳೀಯಾಡಳಿತ ಸಂಸ್ಥೆಗಳಿಗೆ ದ್ವಿತೀಯ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. ಪ್ರಥಮ ಹಂತದಲ್ಲಿ ಉಳಿದ ಏಳು ಜಿಲ್ಲೆಗಳಿಗೆ ಡಿ. 9ರಂದು ಚುನಾವಣೆ ನಡೆದಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2855 ಅಭ್ಯರ್ಥಿಗಳು ನಗರಸಭೆ ಮತ್ತು ತ್ರಿಸ್ತರ ಪಂಚಾಯ ತ್ಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕಾಸರಗೋಡು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಈತನಕ ಶಾಂತಿಯುತವಾಗಿ ಮತದಾನ ಮುಂದುವರಿದಿದೆ. ಯಾವುದೇ ಅಹಿತಕರ ಘಟನೆಗಳು ಈತನಕ ವರದಿಯಾಗಿಲ್ಲ. ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧೆಡೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ತಲಾ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿ ಗೊಳಪಟ್ಟ ಪ್ರದೇಶಗಳಲ್ಲಿ ತಲಾ ಓರ್ವರಂತೆ ಡಿವೈಎಸ್ಪಿಗಳಿಗೆ ಭದ್ರತಾ ಹೊಣೆಗಾರಿಕೆಯನ್ನು ವಹಿಸಿಕೊಡ ಲಾಗಿದೆ. ಇದರ ಹೊರತಾಗಿ ಇನ್ಸ್ಪೆಕ್ಟರ್ಗಳು, ಎಸ್ಐ, ಎಎಸ್ಐ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳು, ಸಿವಿಲ್ ಪೊಲೀಸ್ ಆಫೀಸರ್ಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ, ಸ್ಪೆಷಲ್ ಪೊಲೀಸರು ಮತ್ತು ಹೋಂಗಾರ್ಡ್ಗಳನ್ನು ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗಳನ್ನು ಪಾಲಿಸುವ ಹೊಣೆಗಾರಿಕೆ ಗಾಗಿ ನೇಮಿಸಲಾಗಿದೆ.
ರಾಜಪುರಂ, ವೆಳ್ಳರಿಕುಂಡು ಮತ್ತು ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರತಾ ಹೊಣೆಗಾರಿಕೆ ಯನ್ನು ಓರ್ವ ಡಿವೈಎಸ್ಪಿಗೆ ವಹಿಸಿಕೊಡ ಲಾಗಿದೆ. ಪೊಲೀಸರು ಮಾತ್ರವಲ್ಲದೆ ಪ್ರತೀ ಯೂನಿಟ್ಗಳ ಸ್ಥಿತಿಗತಿಗಳ ಬಗ್ಗೆ ಸದಾ ತೀವ್ರ ನಿಗಾ ಇರಿಸಲು ತಲಾ ಓರ್ವರಂತೆ ವಿಶೇಷ ವೀಕ್ಷಕರನ್ನಾಗಿ ಎಕ್ಸಿಕ್ಯೂಟಿವ್ ಮೆಜಿ ಸ್ಟ್ರೇಟರ್ಗಳನ್ನು ನೇಮಿಸಲಾಗಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಸಂಘರ್ಷ ಸಾಧ್ಯತೆ ಇರುವ ಸೂಕ್ಷ್ಮ ಸಂವೇದಿ ಮತ್ತು ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳು ಇರುವ ಜಿಲ್ಲೆ ಕಣ್ಣೂರು ಆಗಿದೆ. ಕಾಸರಗೋಡು ಜಿಲ್ಲೆಯಲ್ಲಿ 436 ಸೂಕ್ಷ್ಮ ಸಂವೇದಿ ಮತ್ತು 97 ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳಿದ್ದು ಇಂತಹ ಮತಗಟ್ಟೆಗಳಲ್ಲಿ ಅತೀ ಹೆಚ್ಚಿನ ಬಿಗು ಭದ್ರತೆ ಏರ್ಪಡಿಸಲಾಗಿದೆ. ಮತದಾ ನದ ವೇಳೆ ಘರ್ಷಣೆ ನಡೆದಲ್ಲಿ ಅದನ್ನು ನಿಯಂತ್ರಿಸಲು ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜ್ಯಾರಿಗೊಳಿಸಲಾಗುವು ದೆಂಬ ಮುನ್ನೆಚ್ಚರಿಕೆಯನ್ನು ಸಂಬಂಧ ಪಟ್ಟವರು ನೀಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 1.50ರ ವೇಳೆಗೆ ಶೇ. 51.05 ರಷ್ಟು ಮತದಾನ ನಡೆದಿದೆ. ಮತಗಟ್ಟೆಗಳಲ್ಲಿ ಮತದಾರರ ಭಾರೀ ದೊಡ್ಡ ಸರದಿ ಗೋಚರಿಸತೊಡಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಿಣರಾಯಿ ಜ್ಯೂನಿ ಯರ್ ಬೇಸಿಕ್ ಸ್ಕೂಲ್ನ ಮತಗಟ್ಟೆ ಯಲ್ಲಿ ಇಂದು ಬೆಳಿಗ್ಗೆ ಪತ್ನಿ ಯೊಂದಿಗೆ ತೆರಳಿ ಮತ ಚಲಾಯಿಸಿದರು. ಈ ಚುನಾವಣೆಯಲ್ಲಿ ಎಡರಂಗ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಮತ ದಾನ ಮಾಡಿದ ಬಳಿಕ ಮುಖ್ಯ ಮಂತ್ರಿ ಸುದ್ದಿಗಾರರಲ್ಲಿ ತಿಳಿಸಿದ್ದಾರೆ. ಮತದಾನ ಸಮಯವನ್ನು ಇಂದು ಸಂಜೆ 6 ಗಂಟೆ ತನಕ ನಿಗದಿ ಪಡಿಸಲಾಗಿದ್ದರೂ ಆ ವೇಳೆ ಸರದಿಸಾಲಿನಲ್ಲಿ ನಿಂತಿರುವ ಎಲ್ಲರಿಗೂ ಮತ ಚಲಾಯಿಸುವ ಅವಕಾಶ ನೀಡಲಾಗುವುದೆಂದು ಚುನಾವಣಾ ಆಯೋಗ ಹೇಳಿದೆ.







