ಕೊಚ್ಚಿ: ಇಸ್ಲಾಮಿಕ್ ಸ್ಟೇಟ್ (ಐಎಸ್) ಕಾರ್ಯಕರ್ತನಿಗೆ ಎನ್‌ಐಎ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಸಜೆಯನ್ನು ಕೇರಳ ಹೈಕೋರ್ಟ್ ಹತ್ತು ವರ್ಷ ಆಗಿ ಇಳಿಸಿ ತೀರ್ಪು ನೀಡಿದೆ. ತೊಡುಪುಳ ನಿವಾಸಿ ಸುಬಹಾನಿ ಹಾಜ್ (ಅಬು ಜಾಸ್ಮಿನ್) ಎಂಬಾತನಿಗೆ ವಿಧಿಸಲಾಗಿದ್ದ ಜೀವಾ ವಧಿ ಸಜೆಯನ್ನು ಮೇಲ್ಮನವಿಯಲ್ಲಿ ನ್ಯಾಯಮೂರ್ತಿ ವಿ. ರಾಜ ವಿಜಂi ರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್ ಎಂಬವರ ನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಹತ್ತು ವರ್ಷಕ್ಕಿಳಿಸಿ ತೀರ್ಪು ನೀಡಿದೆ.
ಐಎಸ್ ಕಾರ್ಯಚಟುವಟಿಕೆ ಯಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂ ಧಿಸಿ ಎನ್‌ಐಎ ನ್ಯಾಯಾಲಯ ೨೦೨೦ರಲ್ಲಿ ಸುಬಹಾನಿ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿತ್ತು. ಭಯೋ ತ್ಪಾದಕ ಸಂಘಟನೆಯ ಪರವಾಗಿ ಕಾರ್ಯವೆಸಗುವಿಕೆ ಇತ್ಯಾದಿ ಅಪರಾಧ ಕೃತ್ಯಗಳ ಮತ್ತು ಯುಎಪಿಎ ಕಾನೂನು ಪ್ರಕಾರ ಆತನಿಗೆ ಈ ಶಿಕ್ಷೆ ವಿಧಿಸಲಾಗಿತ್ತು.
ಇದು ಅತ್ಯಂತ ಗಂಭೀರವಾದ ಅಪರಾಧ ಕೃತ್ಯಗಳಾಗಿವೆ. ಆದರೆ ಆರೋಪಿ 35ನೇ ವಯಸ್ಸಿನಲ್ಲಿರುವ ವೇಳೆ ಇಂತಹ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದನು. ವಿದೇಶದಿಂದ ಊರಿಗೆ ಹಿಂತಿರುಗಿದ ನಂತರ ಇಂತಹ ಅಪ ರಾಧ ಕೃತ್ಯಗಳಲ್ಲಿ ಆತ ಭಾಗಿಯಾಗಿಲ್ಲ. ಆತ ಮಾನಸಿಕ ಪರಿವರ್ತನೆ ಉಂಟಾ ಗುವ ಸಾಧ್ಯತೆಯನ್ನು ಪರಿಗಣಸಿ ಶಿಕ್ಷೆ ಯಲ್ಲಿ ರಿಯಾಯಿತಿ ನೀಡಲಾಗಿದೆ ಯೆಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಆರೋಪಿ ಸುಬಹಾನಿ ೨೦೧೫ರಲ್ಲಿ ತುರ್ಕಿ ದೇಶದ ಮೂಲಕ ಇರಾಕ್‌ಗೆ ತಲುಪಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡಿದ್ದನು. ಅಲ್ಲಿ ತರಬೇತಿ ಪಡೆಯುವ ವೇಳೆ ಆತ ಗಾಯಗೊಂಡಿದ್ದನು. ಅದರಿಂದಾಗಿ ಆತನಿಗೆ ಐಎಸ್ ಪರ ಯುದ್ಧ ನಡೆಸಲು ಸಾಧವಾಗಿರಲಿಲ್ಲ. ಗಾಯಗೊಂಡಿರುವ ಹಿನ್ನೆಲೆಯಲ್ಲಿ ತನ್ನನ್ನು ಶಿಬಿರದಿಂದ ಬಿಡುಗಡೆಗೊಳಿಸಿ ಊರಿಗೆ ಹಿಂತಿರುಗಲು ಅನುಮತಿ ನೀಡುವಂತೆ ಆತ ಆ ಶಿಬಿರದ ಐಎಸ್ ನೇತಾರರೊಂದಿಗೆ ನಿರಂತರವಾಗಿ ಆಗ್ರಹಿಸಿದ್ದನು. ಅದರ ಪರಿಣಾಮವಾಗಿ ಆತನನ್ನು ಐಎಸ್ ಉಗ್ರರು ಇರಾಕ್‌ನ ಬೀದಿಯೊಂದಕ್ಕೆ ತಂದು ಅಲ್ಲಿ ಉಪೇಕ್ಷಿಸಿದ್ದರ. ನಂತರ 2015ರಲ್ಲಿ ಆತ ಅಲ್ಲಿಂದ ಭಾರತಕ್ಕೆ ತಲುಪಿದ ತಮಿಳುನಾಡಿನಲ್ಲಿ ಸೇಲ್ಸ್‌ಮ್ಯಾನ್ ಆಗಿ ಸೇರಿಕೊಂಡಿದ್ದನು. ಅಲ್ಲಿಂದ 2016 ಅಕ್ಟೋಬರ್ 5ರಂದು ಎನ್‌ಐಎ ಆತನನ್ನು ಬಂಧಿಸಿತ್ತು.