ಖಾಸಗಿ ಬಸ್‌ಗಳಲ್ಲಿ ಕೆಲಸಕ್ಕೆ ಪೊಲೀಸ್ ಸರ್ಟಿಫಿಕೇಟ್ ಬೇಕೆಂಬ ಕ್ರಮಕ್ಕೆ ಹೈಕೋರ್ಟ್ ಸಮರ್ಥನೆ

ಕೊಚ್ಚಿ: ಖಾಸಗಿ ಬಸ್‌ಗಳಲ್ಲಿ ದುಡಿಯುವ ಚಾಲಕರು ಮತ್ತು ನಿರ್ವಾಹಕರು ಪೊಲೀಸ್ ಸರ್ಟಿಫಿಕೇಟ್ ಪಡೆಯಬೇಕೆಂಬ ರಾಜ್ಯ ಸಾರಿಗೆ ಇಲಾಖೆ ನೀಡಿದ ಹೊಸ ನಿರ್ದೇಶಕ್ಕೆ ರಾಜ್ಯ ಹೈಕೋರ್ಟ್ ಸಮರ್ಥನೆ ನೀಡಿದೆ.

ಬಸ್‌ಗಳ ಹಿಂದೆ ಮತ್ತು ಮುಂದುಗಡೆ ಕ್ಯಾಮರಾಗಳನ್ನು ಅಳವಡಿಸಬೇಕು, ವಾಹನ ಎಲ್ಲಿಗೆ ತಲುಪಿದೆ ಎಂಬುವುದನ್ನು ಅರಿತುಕೊಳ್ಳಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಏರ್ಪಡಿಸಬೇಕೆಂಬ ನಿರ್ದೇಶಗಳಿಗೂ ಹೈಕೋರ್ಟ್ ಅಸ್ತು ನೀಡಿದೆ. ಮಾತ್ರವಲ್ಲ ಖಾಸಗಿ ಬಸ್‌ಗಳ ಅಮಿತವೇಗ ಹಾಗೂ ಸ್ಪರ್ಧಾತ್ಮಕ ಓಟವನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ಜ್ಯಾರಿಗೊಳಿಸಿದ ಹೊಸ ಕ್ರಮಗಳಿಗೂ ನ್ಯಾಯಾಲಯ ಸಮರ್ಥನೆ ನೀಡಿದೆ. ಸಾರಿಗೆ ಇಲಾಖೆ ಏರ್ಪಡಿಸಿದ ಹೊಸ ನಿಯಂತ್ರಣಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಮೂಲಕ ವಜಾಗೈದಿದೆ.

RELATED NEWS

You cannot copy contents of this page