ಜಾತಿ ಚಿಂತನೆ ತೊರೆದು ಸಮಸ್ತ ಹಿಂದೂ ಸಮಾಜ ಒಂದಾಗಬೇಕು-ಚಕ್ರವರ್ತಿ ಸೂಲಿಬೆಲೆ

ಕಾಸರಗೋಡು: ಜಾತಿ ಚಿಂತನೆ ತೊರೆದು ಸಮಸ್ತ ಹಿಂದೂ ಸಮಾಜ ಒಂದಾಗಬೇಕೆಂದು ಶ್ರೇಷ್ಠ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಹಿಂದೂ ಸಮಾಜವನ್ನು ನಿರಂತರ ವಾಗಿ ಜಾತಿ  ಹೆಸರಲ್ಲಿ ವಿಭಜಿಸಲಾಗಿದೆ. ಇದರ ಹಿಂದೆ ವ್ಯವಸ್ಥಿತವಾದ ರೀತಿಯ ಷಡ್ಯಂತ್ರ ಅಡಗಿದೆ. ಆದ್ದರಿಂದ ಹಿಂದೂ ಗಳೆಲ್ಲರೂ ಜಾತಿ ಚಿಂತನೆಗೆ ಪ್ರಾಮುಖ್ಯತೆ ನೀಡದೆ ಎಲ್ಲರೂ ಸಂಘಟಿತರಾಗಬೇ ಕಾಗಿದೆಯೆಂದು ಅವರು ಹೇಳಿದ್ದಾರೆ.

ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವ ದಂಗವಾಗಿ ನಿನ್ನೆ ಸಂಜೆ ನಡೆದ ಮಹಿಳಾ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡು ತ್ತಿದ್ದರು.  ಹಿಂದೂಗಳನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕ್ ಆರಂಭಿಸಿರುವ  ಶ್ರೀ ಗಣೇಶೋತ್ಸವ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ. ಹಿಂದೂ ಧರ್ಮವು ಪ್ರಾಚೀನ ಪರಂಪರೆ ಹೊಂದಿರುವ ಸನಾತನ ಧರ್ಮವಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ  ಇಡೀ ವಿಶ್ವದಲ್ಲೇ ಭಾರತ ಇದೇ ದ್ವಿತೀಯ ಆರ್ಥಿಕ ಶ್ರೀಮಂತ ರಾಷ್ಟ್ರವಾಗಿ ಹೊರಹೊ ಮ್ಮಲಿದೆ ಮಾತ್ರವಲ್ಲ ಭಾರತ ಜಾಗತಿP ವಾಗಿ ಒಂದು ಬೃ ಹತ್ ಶಕ್ತಿಯಾಗಿ ಈಗ ಮಾರ್ಪ ಡಲಿದೆ. ಅಯೋಧ್ಯೆ ಯಲ್ಲಿ ಶ್ರೀರಾಮ ಕ್ಷೇತ್ರ ನಿರ್ಮಿಸುವ ಮೂಲಕ ೫೦೦ ವರ್ಷಗಳ ದೇಶದ ಗತವೈಭವ ಮತ್ತೆ ಮರಳಿದೆ. ಎಡಪಂಥೀಯ ಚಿಂತನೆ ಮತ್ತು ಮತಾಂತರದ ಬಗ್ಗೆ ನಮ್ಮ ಮುಂದಿನ ಯುವ ಪೀಳಿಗೆ ಅದರಲ್ಲೂ ಹೆಣ್ಮಕ್ಕಳು ಜಾಗೃತರಾಗಬೇಕಾಗಿದೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇಂದು ಭಾರೀ ಅಪಪ್ರಚಾರ ನಡೆಸಲಾಗುತ್ತಿದೆ ಯೆಂದು ಅವರು ಹೇಳಿದ್ದಾರೆ.

ಮಹಿಳಾ ಸಮಿತಿ ಅಧ್ಯಕ್ಷೆ ವೀಣಾ ಅರುಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ನಗರಸಭಾ ಸದಸ್ಯೆಯರಾದ ಸವಿತಾ ಟೀಚರ್, ಶ್ರೀಲತಾ ಟೀಚರ್, ಉಮಾ ಕಡಪ್ಪುರ, ಸಪ್ತತಿ ಮಹೋತ್ಸವದ ಗೌರವಾಧ್ಯಕ್ಷೆ ವೀಣಾ ಕಾಮತ್, ಡಾ. ಪೂರ್ಣಿಮಾ ಬೆಂಗಳೂರು, ಚಂದ್ರಮತಿ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಸುಳ್ಯ ಶಾಸಕಿ ಭಾಗೀರಥಿ  ಮುರುಳ್ಯ ಮಾತನಾಡಿದರು. ಉಷಾ ಸುರೇಶ್ ಸ್ವಾಗತಿಸಿ,  ಸುರೇಖಾ ಟೀಚರ್ ವಂದಿಸಿದರು.

You cannot copy contents of this page