ಐತಿಹಾಸಿಕ ಮಸೂದೆ ಇಂದು ಸಂಸತ್‌ನಲ್ಲಿ ಮಂಡನೆ: ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಬಂಧನವಾದಲ್ಲಿ ಹುದ್ದೆಯಿಂದ ವಜಾ

ನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿ ವರುಗಳು (ಕೇಂದ್ರಾಡಳಿತ ಪ್ರದೇಶಗಳೂ ಸೇರಿ) ಬಂಧಿಸಲ್ಪಟ್ಟಲ್ಲಿ ಅವರನ್ನು ಪದಚ್ಯುತಿಗೊಳಿಸುವ ಮಸೂದೆಯನ್ನು  ಇಂದು ಲೋಕಸಭೆಯಲ್ಲಿ ಕಂದ್ರ ಗೃಹ ಸಚಿವ ಅಮಿತ್ ಷಾ ಮಂಡಿಸಲಿದ್ದಾರೆ. ಇದರ ಜೊತೆಗೆ ಸಂವಿಧಾನದ (130ನೇ ತಿದ್ದುಪಡಿ) ಮಸೂದೆ-೨೦೨೫, ಕೇಂದ್ರಾ ಡಳಿತ ಸರಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ 2025ಗಳನ್ನೂ ಗೃಹ ಸಚಿವರು ಲೋಕಸಭೆಯಲ್ಲಿ ಇಂದು ಮಂಡಿಸಲಿದ್ದಾರೆ.

 ಆಡಳಿತದಲ್ಲಿ ಹೊಣೆಗಾರಿಕೆ ಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಹಾಗೂ ಅದನ್ನು ಖಚಿತಪಡಿಸಿಕೊಳ್ಳುವ ಮಹತ್ವದ ಹೆಜ್ಜೆಯಾಗಿ ಗಂಭೀರ ಕ್ರಿಮಿನಲ್ ಪ್ರಕ ರಣಗಳಲ್ಲಿ ಬಂಧಿಸಲ್ಪಡುವ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರುಗಳನ್ನು ಪದಚ್ಯುತಿಗೊಳಿಸುವ ಮಹತ್ವದ ಗುರಿಯನ್ನು ಈ ಮಸೂದೆ ಮೂಲಕ ಕೇಂದ್ರ ಸರಕಾರ ಹಾಕಿಕೊಂಡಿದೆ. ಮಾತ್ರ ವಲ್ಲ ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗುವ ಸರಕಾರಿ ಅಧಿಕಾರಿಗಳನ್ನೂ ತ್ವರಿತವಾಗಿ ಸರಕಾರಿ ಸೇವೆಯಿಂದ ವಜಾಗೈಯ್ಯುವ ಕಾನೂನು ಚೌಕಟ್ಟನ್ನೂ ಇದರಲ್ಲಿ ಒಳಪಡಿಸ ಲಾಗಿದೆ. ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧ ಗಳಿಗಾಗಿ ಪ್ರಧಾನಮಂತ್ರಿ, ಮುಖ್ಯ ಮಂತ್ರಿಗಳು ಅಥವಾ ಸಚಿವರುಗಳು ಬಂಧಿಸಲ್ಪಟ್ಟು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಅಂತಹವರು 31ನೇ ದಿನದಂದು ತಮ್ಮ ಹುದ್ದೆಗಳನ್ನು ಕಳೆದು ಕೊಳ್ಳುತ್ತಾರೆ ಎಂಬ ಷರತ್ತನ್ನು ಈ ಮಸೂದೆಯಲ್ಲಿ ಹೇರಲಾಗಿದೆ.  ಮಾತ್ರ ವಲ್ಲ ಉನ್ನತ ಶ್ರೇಣಿಯ ಸಾರ್ವಜನಿಕ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ  ಮಾಡುವ ರೀತಿಯಲ್ಲಿ ಮಸೂದೆಯನ್ನು ವಿನ್ಯಾಸಗೊಳಿಸಲಾಗಿದೆ. ಕಾನೂನು ಪ್ರಕ್ರಿಯೆಗೆ ಒಳಪಟ್ಟು ಅಂತಹ  ನಾಯಕರು ಮತ್ತು ಅಧಿಕಾರಿಗಳು ಬಳಿಕ ಬಂಧನದಿಂದ ಬಿಡುಗಡೆಗೊಂಡಲ್ಲಿ  ನಷ್ಟಗೊಂಡ ಸ್ಥಾನವನ್ನು ಮರುಸ್ಥಾಪಿಸ ಬಹುದು ಎಂಬ ಅಂಶವನ್ನು ಮಸೂದೆ ಯಲ್ಲಿ ಒಳಪಡಿಸಲಾಗಿದೆ. ಅಧಿಕಾರಿಗಳ  ಪ್ರಕಾರ, ಭ್ರಷ್ಟಾಚಾರ, ಭಯೋತ್ಪಾದನೆ ಅಥವಾ ಹಿಂಸಾತ್ಮಕ ಅಪರಾಧಗಳಂತಹ ಗಂಭೀರ ಚಟುವಟಿಕೆಗಳಿಗೆ ಸಂಬಂಧಿಸಿ ಕಾನೂನು ಪರಿಶೀಲನೆಯನ್ನು ಎದುರಿಸು ತ್ತಿರುವ ನಾಯಕರು ತನಿಖೆಯ ಸಮಯದಲ್ಲಿ ಅಧಿಕಾರದಲ್ಲಿ ಮುಂದುವರಿಯದಂತೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಬಂಧನೆಯು ಕಾನೂನು ವ್ಯಾಪ್ತಿಗೆ ಬರುವ  ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಸಮಾನವಾಗಿ ಅನ್ವಯಗೊಳ್ಳುತ್ತದೆಯೆಂದೂ ಮಸೂದೆಯಲ್ಲಿ ತಿಳಿಸಲಾಗಿದೆ.

ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್

ನವದೆಹಲಿ: ಗಂಭೀರ ಪ್ರಕರಣ ಗಳಿಗೆ ಸಂಬಂಧಿಸಿ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಸಚಿವರುಗಳು  ಬಂಧಿಸಲ್ಪಟ್ಟಲ್ಲಿ ಅವರನ್ನು ಆ ಸ್ಥಾನದಿಂದ ಪದಚ್ಯುತಿಗೊಳಿಸುವ ಕೇಂದ್ರ ಸರಕಾರದ ಹೊಸ   ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಅನಾಗರಿಕ ರೀತಿಯ ಮಸೂದೆಯಾಗಿದೆಯೆಂದು ಅದನ್ನು ಸಂಘಟಿತವಾಗಿ ವಿರೋಧಿಸ ಲಾಗುವುದೆಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ ಮಾತ್ರವಲ್ಲದೆ  ಮಸೂದೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವು ದೆಂದೂ ಅವರು ಹೇಳಿದ್ದಾರೆ.

You cannot copy contents of this page