ಸರಕಾರದ ಅಂಗೀಕಾರವಿಲ್ಲದ ‘ಹೋಮ್ ಸ್ಟೇ’ಗಳಿಗೆ ಶೀಘ್ರ ಬೀಗ

ಕಾಸರಗೋಡು: ಸರಕಾರದ ಅಂಗೀಕಾರವಿಲ್ಲದೆ ಪ್ರವಾಸೀ ಕೇಂದ್ರಗಳಲ್ಲಿ ‘ಹೋಮ್ ಸ್ಟೇ’ಗಳನ್ನು ನಿರ್ಮಿಸಿ ಅದರ ಹೆಸರಲ್ಲಿ ನಡೆಸಲಾಗುವ ವ್ಯಾಪಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದೆ. ಪ್ರವಾಸಿಗರಿಗೆ ವಾಸ ಸೌಕರ್ಯ ಏರ್ಪಡಿಸುವ ಹೆಸರಲ್ಲಿ ‘ಹೋಮ್ ಸ್ಟೇ’ ಎಂಬ ಹೆಸರನ್ನು ಉಪಯೋಗಿಸಿ ಸರಕಾರದ ಅನುಮತಿ ಇಲ್ಲದೆ ವಸತಿ ಸೌಕರ್ಯಗಳನ್ನು ನಿರ್ಮಿಸುವುದರ ವಿರುದ್ಧ ಇನ್ನು ಕ್ರಮ ಕೈಗೊಳ್ಳಲಾಗುವುದು. ಇಂತಹ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಪ್ರವಾಸೋದಮ ಇಲಾಖೆಯ ಕ್ಲಾಸಿಫಿಕೇಷನ್ ಸರ್ಟಿಫಿಕೆಟ್‌ನ್ನು ಮೊದಲು ಪಡೆಯಬೇಕು. ಅದನ್ನು ಪಡೆಯದೆ ಹೋಮ್ ಸ್ಟೇ ಹೆಸರಲ್ಲಿ ವಸತಿ ಸೌಕರ್ಯ ಏರ್ಪಡಿಸಿದಲ್ಲಿ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಅನಧಿಕೃತ ಹೋಮ್ ಸ್ಟೇಗಳು ಭದ್ರತಾ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಸರಕಾರ ಇಂತಹ ಕ್ರಮಕ್ಕೆ ಮುಂದಾಗಿದೆ.

ಆನ್‌ಲೈನ್ ಮೂಲಕ ರಾಜ್ಯದ 5000ದಷ್ಟು ಹೋಮ್ ಸ್ಟೇ ಗಳಿಗೆ ಬುಕ್ಕಿಂಗ್ ನಡೆಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಸರಕಾರಿ ಅಂಗೀಕೃತ 1200ರಷ್ಟು ಹೋಮ್ ಸ್ಟೇಗಳು ಮಾತ್ರವೇ ಇದೆ. ಸರಕಾರದ ಅಂಗೀಕಾರ ಹೊಂದಿರುವ ಹೋಮ್ ಸ್ಟೇಗಳಿಗೆ ಇನ್ನು ಬ್ರಾಂಡ್ ಸಿಂಬಲ್ ಮತ್ತು ಕ್ಯೂಆರ್ ಕೋಡ್ ನೀಡಲು ಪ್ರವಾಸೋದ್ಯಮ ಇಲಾಖೆ ತೀರ್ಮಾನಿಸಿದೆ.

RELATED NEWS

You cannot copy contents of this page