ಕಾಸರಗೋಡು: ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 13ರ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿದ್ದಾರೆ. ವಿಭಿನ್ನ ದಿನಗಳಲ್ಲಾಗಿ ದೌರ್ಜನ್ಯಗೈದ 23ರ ಯುವಕ ಹಾಗೂ ಇನ್ನೋರ್ವ ಅಪ್ರಾಪ್ತನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. 13ರ ಬಾಲಕ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.
