ಪತ್ತನಂತಿಟ್ಟ: ಶಬರಿಮಲೆ ದೇಗುಲ ದಲ್ಲಿ ಜೇನುತುಪ್ಪದ ಹರಕೆ ಸೇವೆಗಿರುವ ಜೇನುತುಪ್ಪ ವಿತರಿಸಿದ್ದು ಪೊಮಿಕ್ ಆಸಿಡ್ ಕಂಟೈನರ್‌ನಲ್ಲಿ ಆಗಿತ್ತೆಂಬ ಗಂಭೀರ ವಿಷಯ ಹೊರಬಂದಿದೆ. ಇದಕ್ಕೆ ಸಂಬಂಧಿಸಿ ಜೇನುತುಪ್ಪ ವಿತರಿಸಿದ ಗುತ್ತಿಗೆದಾರರಿಗೆ ಶಬರಿಮಲೆ ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ನೋಟೀಸು ಜ್ಯಾರಿಗೊಳಿಸಿದ್ದಾರೆ.
ಹೀಗೆ ವಿತರಿಸಲಾದ ಜೇನುತುಪ್ಪ ವನ್ನು ಉಪಯೋಗಿಸದೆ ಅದನ್ನು ಇನ್ನಷ್ಟು ಸಮಗ್ರ ರಾಸಾಯನಿಕ ಪರೀಕ್ಷೆ ಗಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ.
ಶಬರಿಮಲೆ ದೇಗುಲದಲ್ಲಿ ಉಪಯೋಗಿಸುವ ಎಲ್ಲಾ ಸಾಮಾಗ್ರಿಗಳನ್ನು ಮೊದಲು ಪಂಪಾದಲ್ಲಿರುವ ಆಹಾರ ಭದ್ರತಾ ವಿಭಾಗದ ಲ್ಯಾಬ್‌ಗೆ ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಹೀಗೆ ಕಳುಹಿಸಿದ ಸಾಮಗ್ರಿಗಳನ್ನು ಪ್ರಸ್ತುತ ಲ್ಯಾಬ್‌ನಲ್ಲಿ ಸಮರ್ಪಕ ರೀತಿಯಲ್ಲಿ ಪರೀಕ್ಷಿಸಿ ಅದು ಉಪಯೋಗಕ್ಕೆ ಯೋಗ್ಯವಾಗಿದೆಯೆಂದು ಖಾತರಿಪಡಿ ಸಿದ ಬಳಿಕವಷ್ಟೇ ಶಬರಿಮಲೆ ದೇಗುಲದಲ್ಲಿ ಉಪಯೋಗಿಸಲಾಗುತ್ತಿದೆ. ಆದರೆ ಶಬರಿಮಲೆಗೆ ವಿತರಿಸಲಾದ ಜೇನುತುಪ್ಪವನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸುವ ವಿಷಯದಲ್ಲಿ ಆಹಾರ ಭದ್ರತಾ ಲ್ಯಾಬ್‌ನ ರಿಸರ್ಚ್ ಅಧಿಕಾ ರಿಯ ವತಿಯಿಂದ ಲೋಪದೋಷ ಉಂಟಾಗಿದೆಯೆಂದು ಈ ಬಗ್ಗೆ ತನಿಖೆ ನಡೆಸಿದ ದೇವಸ್ವಂ ಮಂಡಳಿಯ ವಿಜಿಲೆನ್ಸ್ ವಿಭಾಗ ದೇವಸ್ವಂ ಮಂಡಳಿಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ. ಸಾರ್ವಜನಿಕ ಸಂಸ್ಥೆಯಾದ ರೆಡ್ಕೋ ಈ ಜೇನುತುಪ್ಪವನ್ನು ಪೊಮಿಕ್ ಆಸಿಡ್ ವಿತರಿಸುವ ಕಂಟೈನರ್‌ಗಳಲ್ಲಿ ಶಬರಿಮಲೆಗೆ ಪೂರೈಸಿದೆ ಎಂದು ವಿಜಿಲೆನ್ಸ್ ಪರಿಶೀಲನೆಯಲ್ಲಿ ಪತ್ತೆಹಚ್ಚಲಾಗಿದ್ದು, ಅದರ ಆಧಾರದಲ್ಲಿ ಈ ವಿಷಯದಲ್ಲಿ ರೆಡ್ಕೊಗೂ ಸ್ಪಷ್ಟೀಕರಣ ನೀಡುವಂತೆ ನೋಟೀಸು ಜ್ಯಾರಿ ಗೊಳಿಸಲಾಗಿದೆ ಎಂದು ಶಬರಿಮಲೆ ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ಒ.ಜಿ. ಬೈಜು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಗುತ್ತಿಗೆದಾರ ಮತ್ತು ರೆಡ್ಕೊದಿಂದ ಲಭಿಸುವ ಸ್ಪಷ್ಟೀ ಕರಣಗಳನ್ನು ಪರಿಶೀಲಿಸಿ ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈತನಕ ಲಭಿಸಿದ್ದು ಪ್ರಾಥಮಿಕ ವರದಿಗಳು ಮಾತ್ರವೇ ಆಗಿದೆಯೆಂದು ಅವರು ತಿಳಿಸಿದ್ದಾರೆ. ಸದ್ಯ ಶಬರಿಮಲೆ ದೇಗುಲದಲ್ಲಿ ಅಭಿಷೇಕ ಇತ್ಯಾದಿಗಳಿಗಾಗಿ ಹಳೆ ಸ್ಟೋಕ್‌ನಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಲಾಗುತ್ತಿದೆ.







