ಹೋಟೆಲ್ ನೌಕರ ನಿಧನ

ಉಪ್ಪಳ: ಪುತ್ತೂರು ಬೆಳ್ಳಾರೆ ನಿವಾಸಿ ಉಪ್ಪಳದಲ್ಲಿ ಹೋಟೆಲ್ ನೌಕರನಾಗಿದ್ದ ಜಯೇಂದ್ರ ಕಾಮತ್ (65) ನಿಧನ ಹೊಂದಿದರು. ಇವರು ಉಪ್ಪಳದ ತ್ರಿಭುವನ್ ಹೋಟೆಲ್‌ನಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ತಯಾರಿ ಕೆಲಸ ಮಾಡುತ್ತಿದ್ದರು. ಹಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ಸೋಮವಾರ ಮಧ್ಯಾಹ್ನ ಉಲ್ಬಣಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಆದರೆ ರಾತ್ರಿ ನಿಧನರಾದರು. ಮೃತರು ಅವಿವಾಹಿತರಾಗಿದ್ದಾರೆ. ನಿನ್ನೆ ಸಂಜೆ ಮಂಗಲ್ಪಾಡಿ ಸೇವಾ ಭಾರತಿ ಕಾರ್ಯಕರ್ತರು ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಸಿದರು. ಈ ವೇಳೆ ಮೃತರ ಸಹೋ ದರಿ, ಬಂಧುಗಳು ಹಾಗೂ ಹೋ ಟೆಲ್ ಮಾಲಕ ಸುಕುಮಾರ, ಹೋ ಟೆಲ್‌ನ ನೌಕರರು ಭಾಗವಹಿಸಿದರು.

You cannot copy contents of this page